ಬಾಗಲಕೋಟೆ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋಗಿದ್ದವರಿಗೆ ಎಲೆಕ್ಷನ್ ಅಭ್ಯರ್ಥಿಗಳು ರತ್ನಗಂಬಳಿ ಹಾಸಿ ಒಂದು ದಿನದ ಮಟ್ಟಿಗೆ ರಾಜ ಮರ್ಯಾದೆ ನೀಡಿರುವ ಘಟನೆ ಜಿಲ್ಲೆಯ ಇಳಕಲ್ ಬಳಿಯ ಗುಳೇದಗುಡ್ಡ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತಿ ಚುನಾಣೆಯ ಎರಡನೇ ಹಂತ ನಡೆಯುತ್ತಿರುವ ಬೆನ್ನಲ್ಲೇ ಮಂಗಳೂರು, ಬೆಂಗಳೂರು, ಗೋವಾ, ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಗ್ರಾಮಸ್ಥರು ಮತದಾನ ಮಾಡಿ ವಾಪಸ್ ಹೋಗಲು ಅಭ್ಯರ್ಥಿಗಳು ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಗುಳೆ ಹೋದ ಗ್ರಾಮಸ್ಥರಿಗೆ ಓಡಾಟದ ಖರ್ಚುವೆಚ್ಚವನ್ನು ಕೊಡುವ ಭರವಸೆಯನ್ನು ಸಹ ನೀಡಿದ್ದರು.
ಈ ನಿಟ್ಟಿನಲ್ಲಿ, ಇಳಕಲ್, ಗುಳೇದಗುಡ್ಡ ಬಸ್ ನಿಲ್ದಾಣಗಳಲ್ಲಿ ನೂರಾರು ಜನರು ಬಂದು ಇಳಿದಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಮತದಾನಕ್ಕಾಗಿ ಜನರು ತೆರಳಿದ್ದು, ಇಳಕಲ್ ಬಸ್ ನಿಲ್ದಾಣದಿಂದ ಪಕ್ಕದ ರಾಯಚೂರು ಜಿಲ್ಲೆಗೆ ಹೋಗುವ ಜನರು ಸಹ ಇದರಲ್ಲಿ ಇದ್ದಾರೆ. ಊರುಗಳಿಗೆ ವಾಪಸ್ ಆದವರಿಗೆ ಗುಳೇದಗುಡ್ಡ ಕ್ಯಾಂಟೀನ್ನಲ್ಲಿ ಉಪಾಹಾರದ ವ್ಯವಸ್ಥೆ ಮಾಡಿ ಬಳಿಕ ಗ್ರಾಮಗಳಿಗೆ ಜನರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಸಹ ಮಾಡಲಾಗಿತ್ತು. ಈ ಬಗ್ಗೆ ಗುಳೆ ಹೋದ ಜನರಲ್ಲಿ ವಿಚಾರಿಸಿದಾಗ ಬಂದು ಹೋಗವ ವಾಹನದ ಚಾರ್ಜ್, ಊಟ, ತಿಂಡಿಗಾಗಿ 2,000 ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಹೀಗಾಗಿ, ನಾವು ಮತದಾನ ಮಾಡಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿಗಳಿಗೆ ಊರು ಬಿಟ್ಟವರೇ ಟಾರ್ಗೆಟ್ ..!
Published On - 1:57 pm, Sun, 27 December 20