ಗದಗದಲ್ಲಿ 14 ವರ್ಷದ ಬಾಲಕಿ ಕೊಲೆ ಪ್ರಕರಣ; ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಸಿ.ಸಿ.ಪಾಟೀಲ್

| Updated By: ಪೃಥ್ವಿಶಂಕರ

Updated on: Mar 31, 2021 | 1:29 PM

14 ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪ ಮಅಡಿದ್ದಾರೆ. ಈ ಕುರಿತಾಗಿ ನೊಂದ ಬಾಲಕಿಯ ಕುಟುಂಬಸ್ಥರನ್ನು ಸಚಿವ ಸಿ.ಸಿ ಪಾಟೀಲ್​ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಗದಗದಲ್ಲಿ 14 ವರ್ಷದ ಬಾಲಕಿ ಕೊಲೆ ಪ್ರಕರಣ; ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಸಿ.ಸಿ.ಪಾಟೀಲ್
ಸಚಿವ ಸಿ.ಸಿ ಪಾಟೀಲ್ (ಸಂಗ್ರಹ ಚಿತ್ರ)
Follow us on

ಗದಗ: ನರಗುಂದ ಪಟ್ಟಣದಿಂದ 14 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದಾಗಿ ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದರು. ಈ ಕುರಿತಂತೆ ನರಗುಂದ ಪಟ್ಟಣದ ಮೃತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವ ಸಿ.ಸಿ.ಪಾಟೀಲ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದಾರೆ.

ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸಚಿವ ಸಿ.ಸಿ ಪಾಟೀಲ್​ ಮಾತನಾಡಿ, ಬೆಳಗಾವಿ ಎಸ್​ಪಿಯವರಿಗೆ ಸರಿಯಾಗಿ ತನಿಖೆ ಮಾಡುವಂತೆ ಸೂಚನೆ ನೀಡಿದ್ದೇನೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶ ಮಾಡಿದ್ದೇನೆ. ಕಾನೂನಿನ ವ್ಯಾಪ್ತಿಯಲ್ಲಿ ಆರೋಪಿಗೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು. ಆರೋಪಿಗೆ ಉಗ್ರವಾದ ಶಿಕ್ಷೆಯನ್ನು ನಮ್ಮ ಸರ್ಕಾರ ನೀಡುತ್ತದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ
ನರಗುಂದ ಪಟ್ಟಣದಿಂದ ಮಾರ್ಚ್​ 20ರಂದು ಬಾಲಕಿ ನಾಪತ್ತೆಯಾಗಿದ್ದಳು. ನರಗುಂದ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಈ ಕುರಿತಂತೆ ಪೊಲೀಸರು ತನಿಖೆ ನಡೆಸಿದಾಗ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಘಟನೆಯ ತನಿಖೆಯ ನಂತರ ಆರೋಪಿ ಸದ್ದಾಂ ಎನ್ನುವ ಯುವಕನನ್ನು ರಾಮದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತ್ಯಾಚಾರ ಮಾಡಿ, ಕೈ ಕಟ್ ಮಾಡಿ ಪಾಗಲ್‌ ಪ್ರೇಮಿ ವಿಕೃತಿ..!
ಗದಗ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯವೇ ಈ ಘಟನೆಯಿಂದ ಬೆಚ್ಚಿ ಬಿದ್ದಿದೆ. ನರಗುಂದ ಪಟ್ಟಣದಲ್ಲಿ ಪಾಗಲ್ ಪ್ರೇಮಿಯೊಬ್ಬ ಬಾಲಕಿ ಮೇಲೆ ವಿಕೃತಿ ಮೆರೆದಿದ್ದಾನೆ. ಈ ತಿಂಗಳ 20 ಬೆಳಗ್ಗೆ ಆ ಬಾಲಕಿ ಹೆತ್ತವ್ರಿಗೆ ಹೇಳಿ ಹೊಲಕ್ಕೆ ಹೋಗಿದ್ಲು. ಆದ್ರೆ, ಹೊಲಕ್ಕೆ ಹೋಗಿ ರಾತ್ರಿಯಾದ್ರೂ ಮನೆಗ ಮರಳಿಲ್ಲ. ಆಗ ಪೋಷಕರು ಗಾಬರಿಯಾಗಿ ಎಲ್ಲ ಕಡೆಯೂ ಹುಡುಕಿದ್ದಾರೆ. ಆದ್ರೆ, ಬಾಲಕಿ ಪತ್ತೆಯಾಗಿಲ್ಲ. ಆಗ ಬಾಲಕಿ ಪೋಷಕರು ಮಾರ್ಚ್ 23 ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಅಂತ ದೂರು ನೀಡಿದ್ದಾರೆ.

ಈ ನಡುವೆ ಮಾರ್ಚ್ 27 ರಂದು ಪೋಷಕರಿಗೆ ಮಗಳ ಕೊಲೆ ಸುದ್ದಿ ಬಂದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರ ಗ್ರಾಮದ ಜಮೀನೊಂದರಲ್ಲಿ ಬಾಲಕಿ ಕೊಲೆಯಾಗಿತ್ತು. ನರಗುಂದ ಪಟ್ಟಣದ ಸದ್ದಾಂ ಬೆಟಗೇರಿ ಎಂಬ 22 ವರ್ಷದ ಕಿರಾತಕನೇ ಬಾಲಕಿಯನ್ನು ಕೊಂದ ಪಾಪಿ ಅಂತ ಹೆತ್ತವ್ರು ಆರೋಪಿಸಿದ್ದಾರೆ. ಮಗಳನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಕೈ ಕಟ್ ಮಾಡಿ ವಿಕೃತ ಮೆರೆದಿದ್ದಾನೆ ಅಂತ ಬಾಲಕಿ ಪೋಷಕರು ಆರೋಪಿಸಿದ್ದಾರೆ.

ಸ್ವಲ್ಪ ದಿನ ಇಬ್ಬರ ನಡುವಿನ ಪರಿಚಯಕ್ಕೆ ಬ್ರೇಕ್ ಬಿದ್ದಿದೆ
ನರಗುಂದ ಪಟ್ಟಣದ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಆದ್ರೆ, ಕೊಲೆಗಾರ ಸದ್ದಾಂ ಬೆಟಗೇರಿ ಮೂಲತಃ ನವಲಗುಂದ ತಾಲೂಕಿನವನು. ಕಳೆದ ವರ್ಷ ಲಾಕ್ ಡೌನ್ ಬಳಿಕ ಸಬಂಧಿಕರ ಮನೆಗೆ ಬಂದಿದ್ದಾನೆ. ಅಲ್ಲೇ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.ಈ ವೇಳೆ ಸದ್ಧಾಂ ಹಾಗೂ ಬಾಲಕಿ ನಡುವೆ ಪರಿಚಯವಾಗಿದೆ. ಆದ್ರೆ, ಕಿರಾತಕ ಸದ್ದಾಂ ಬಾಲಕಿ ಹಿಂದೆ ಬಿದ್ದಿದ್ದನಂತೆ. ಆಗ ಬಾಲಕಿ ಹಾಗೂ ಹುಡುಗನ ಪಾಲಕರು ಸಾಕಷ್ಟು ಬುದ್ಧಿವಾದ ಹೇಳಿದ್ದಾರೆ. ಆಗ ಸ್ವಲ್ಪ ದಿನ ಇಬ್ಬರ ನಡುವಿನ ಪರಿಚಯಕ್ಕೆ ಬ್ರೇಕ್ ಬಿದ್ದಿದೆ. ಆದ್ರೆ, ಮಾರ್ಚ್ 20ರಂದು ಹೊಲಕ್ಕೆ ಹೋಗುತ್ತಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾನಂತೆ. ಬಾಲಕಿ ಹತ್ಯೆ ನರಗುಂದ ತಾಲೂಕಿನಲ್ಲಿ

ಕೊಲೆಯಾದ ಬಾಲಕಿ ಮನೆಗೆ ಗದಗ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ಇನ್ನು ಈ ಘಟನೆ ರಾಜ್ಯಾದಂತ್ಯ ಆಕ್ರೋಶಕ್ಕೆ ಕಾರಣವಾಗಿದೆ.ಒಟ್ನಲ್ಲಿ ಆ ಬಾಲಕಿಗೆ ಇನ್ನೂ ಆಟ ಆಡೋ ವಯಸ್ಸು. ಆದ್ರೆ, ಆ ಮುದ್ದಾದ ಬಾಲಕಿ ಮೇಲೆ ದುರುಳನ ಕೆಂಗಣ್ಣು ಬಿದ್ದು ಹೆಣವಾಗಿದ್ದಾಳೆ. ಮುದ್ದಾಗಿ ಸಾಕಿದ ಮಗಳನ್ನ ಕಳೆದುಕೊಂಡು ಹೆತ್ತವ್ರು ಕಣ್ಣೀರು ಹಾಕುತ್ತಿದ್ದಾರೆ.

ಬಾಲಕಿ ಭೀಕರ ಹತ್ಯೆಗೆ ತೀವ್ರ ಖಂಡನೆ
ಇನ್ನೂ ಈ ಅಮಾನುಷ ಕೃತ್ಯಕ್ಕೆ ರಾಜ್ಯದ್ಯಾಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂದು ನರಗುಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ರ್ಯಾಲಿ ಆಯೋಜಿಸಲಾಗಿದೆ. ರ್ಯಾಲಿಯ ಉದ್ದಕ್ಕೂ ಮಕ್ಕಳು, ಮಹಿಳೆಯರು ಆರೋಪಿಯ ವಿರುದ್ಧ ಆಕ್ರೋಶ ಹೊರಹಾಕಿದರು. ಜೊತೆಗೆ ಶಿವಾಜಿ ಸರ್ಕಲ್​ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಪರಿಣಾಮವಾಗಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರು ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ

Published On - 4:27 pm, Tue, 30 March 21