ಬಾಗಲಕೋಟೆ: ಎಂಆರ್ಎನ್ ಫೌಂಡೇಷನ್ ವತಿಯಿಂದ ಸಚಿವ ಮುರುಗೇಶ್ ನಿರಾಣಿ ಅವರು ಜಿಲ್ಲೆಗೆ 2 ಆ್ಯಂಬುಲೆನ್ಸ್ ಮತ್ತು 6 ಟ್ಯಾಕ್ಸಿಗಳ ನೆರವು ನೀಡಿದ್ದಾರೆ. ಕೊವಿಡ್ ಸಂಕಷ್ಟದಲ್ಲಿ ಸಹಾಯವಾಗುವಂತೆ ಸಚಿವ ಮುರುಗೇಶ್ ನಿರಾಣಿ ನೆರವು ನೀಡಿದ್ದಾರೆ. ಬೀಳಗಿ ತಾಲೂಕು ಆಸ್ಪತ್ರೆ, ಕೊವಿಡ್ ಕೇರೆ ಸೆಂಟರ್ಗೆ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಅವರ ಜೊತೆ ಭೇಟಿ ನೀಡಿದ ಸಚಿವ ಮುರುಗೇಶ್ ನಿರಾಣಿ ಅವರು 500 ಡಿಸ್ಪೋಜಲ್ ಬೆಡ್ ವಿತರಣೆ ಮಾಡಿದ್ದಾರೆ. ಸಂಸದ ಪಿ.ಸಿ ಗದ್ದಿಗೌಡರ, ಪರಿಷತ್ ಸದಸ್ಯ ಹನಮಂತ ನಿರಾಣಿ, ಡಿಸಿ ಕೆ.ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ್ ಇವರಿಗೆ ಸಾಥ್ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಕೊರೊನಾ ಎರಡನೇ ಅಲೆಗೆ ಐವತ್ತು ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಎಪ್ರಿಲ್11 ರಿಂದ ಇಲ್ಲಿವರೆಗೂ ಒಟ್ಟು ಐವತ್ತು ಜನರು ಕೊವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ನಿನ್ನೆ (ಶನಿವಾರ) ಒಂದೇ ದಿನ 1,563 ಕೊವಿಡ್ ಪಾಸಿಟಿವ್ ವರದಿಯಾಗಿದೆ.
ಮೈಸೂರಿನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲೇ ನೇಣಿಗೆ ಶರಣು
ಮೈಸೂರಿನ ತನ್ವಿರ್ ಸೇಠ್ ನಗರದ ನಿವಾಸಿ, ಎರಡು ದಿನಗಳ ಹಿಂದೆ ಕೊವಿಡ್ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇವರಾಜು ಎಂಬಾತ ಆಕ್ಸಿಜನ್ ವಯರ್ನಿಂದಲೇ ನೇಣು ಹಾಕಿಕೊಂಡ ಘಟನೆ ಜಿಲ್ಲೆಯ ಟ್ರಾಮ ಕೇರ್ ಸೆಂಟರ್ನಲ್ಲಿ ನಡೆದಿದೆ.ದೇವರಾಜ ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕ್ಸಿಜನ್ ಪಡೆಯುತ್ತಿದ್ದ ಪೈಪ್ನಿಂದ ಶೌಚಾಲಯದ ಕಿಟಕಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ರೆಮ್ಡೆಸಿವರ್ ಮಾರಾಟ ಮಾಡುತ್ತಿದ್ದ 10 ಜನರ ಬಂಧನ; ಜಿಲ್ಲಾಸ್ಪತ್ರೆ ನಿಷ್ಕಾಳಜಿ ಬಗ್ಗೆ ಮುಂದುವರಿದ ತನಿಖೆ
ಬಾಗಲಕೋಟೆಯಲ್ಲೂ ಹೆಚ್ಚಿದ ರೆಮ್ಡೆಸಿವಿರ್ ಬೇಡಿಕೆ; ಕೊರೊನಾಗಿಂತಲೂ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ಆತಂಕವೇ ಹೆಚ್ಚು