ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಬುದ್ಧತೆಯಿಂದ ಮಾತನಾಡಬೇಕು: ಸಚಿವ ಪ್ರಹ್ಲಾದ್ ಜೋಶಿ

| Updated By: shruti hegde

Updated on: Mar 30, 2021 | 12:36 PM

ಸಚಿವ ಪ್ರಹ್ಲಾದ್ ಜೋಶಿ ಸೈಡ್ ಆ್ಯಕ್ಟರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಬುದ್ಧತೆಯಿಂದ ಮಾತನಾಡಬೇಕು: ಸಚಿವ ಪ್ರಹ್ಲಾದ್ ಜೋಶಿ
ಪ್ರಹ್ಲಾದ್‌ ಜೋಶಿ
Follow us on

ಧಾರವಾಡ: ಪ್ರಹ್ಲಾದ್ ಜೋಶಿ ಸೈಡ್ ಆ್ಯಕ್ಟರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿ ಮೋದಿಯಿಂದ ಹಿಡಿದು ಎಲ್ಲರೂ ಚುನಾಯಿತ ನಾಯಕರು. ಕಾಂಗ್ರೆಸ್​ನಲ್ಲಿ ಇರೋದು ಒನ್ ಫ್ಯಾಮಿಲಿ, ಒನ್ ನೇಷನ್. ರಾಹುಲ್ ಅಧ್ಯಕ್ಷ ಸ್ಥಾನ ಬಿಟ್ಟರೂ ಅವರೇ ಮತ್ತೆ ಅಧ್ಯಕ್ಷರಾಗಿದ್ದಾರೆ. ಅಂಥವರ ಮುಂದೆ ನೀವು ಕೈಮುಗಿದು ನಿಲ್ಲುತ್ತೀರಿ. ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಅವರು ಪ್ರಬುದ್ಧತೆಯಿಂದ ಮಾತನಾಡಬೇಕು ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಸಂತ್ರಸ್ತೆ ಯುವತಿ ಒಂದು ಹೇಳಿಕೆ ನೀಡುತ್ತಿದ್ದಾಳೆ. ಆಕೆಯ ಕುಟುಂಬಸ್ಥರು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಸಂತ್ರಸ್ತೆ ಅಂತಾ ಹೇಳಿಕೊಳ್ಳೋ ಆಕೆ ಕೋರ್ಟ್ ಇಲ್ಲವೇ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ಹೇಳಿಕೆ ಕೊಡಬೇಕು ಇಲ್ಲವಾದರೆ ಪ್ರಕರಣ ಇತ್ಯರ್ಥವಾಗುವುದು ಕಷ್ಟ. ಯುವತಿಯ ಆಡಿಯೋ ನೋಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧನ ಮಾಡಬೇಕೆಂದು ಹೇಳಲು ಆಗುವುದಿಲ್ಲ. ಪ್ರಾಥಮಿಕ ಹೇಳಿಕೆ ಕೊಡುವವರೆಗೆ ಮುಂದುವರೆಯೋದು ಕಷ್ಟ. ಈ ಕುರಿತಾಗಿ ಎಸ್ಐಟಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಸದ್ಯದಲ್ಲೇ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಡಿ ಲೇಡಿ ಕೋರ್ಟ್​ ಹಾಜರು ಸಾಧ್ಯತೆ: ಡಿಕೆಶಿವಕುಮಾರ್-ರಮೇಶ್​ ಜಾರಕಿಹೊಳಿ ಮನೆಗಳಿಗೆ ಬಿಗಿ ಭದ್ರತೆ

ವಿಚಾರಣೆ ವೇಳೆ ತಡಬಡಾಯಿಸಿದ ರಮೇಶ್ ಜಾರಕಿಹೊಳಿ; ಕೆಲ ಪ್ರಶ್ನೆಗಳಿಗೆ ಉತ್ತರಿಸಲು 4 ದಿನಗಳ ಕಾಲಾವಕಾಶ ಕೋರಿಕೆ