ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಗ್ರಾಮಗಳಲ್ಲಿ ಕೊವಿಡ್ ಟೆಸ್ಟ್ ಮತ್ತು ಚಿಕಿತ್ಸೆ ನೀಡುವ ಸಲುವಾಗಿ ವೈದ್ಯಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಎನ್ನುವ ಶಿರ್ಷಿಕೆಯಡಿ ಕಾರ್ಯಕ್ರಮಕ್ಕೆ ಇಂದು ಸಚಿವ ಆರ್. ಅಶೋಕ್ ಚಾಲನೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿ ಆವರಣದಲ್ಲಿ ಮೊಬೈಲ್ ಕ್ಲಿನಿಕ್ ವಾಹನಗಳಿಗೆ ಚಾಲನೆ ನೀಡುವ ಮೂಲಕ ಈ ಯೋಜನೆಯನ್ನು ಉದ್ಘಾಟಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲೂಕಿಗೂ 15 ಮೊಬೈಲ್ ಕ್ಲಿನಿಕ್ ವಾಹನಗಳ ಸಂಚಾರ ಮತ್ತು
ಗ್ರಾಮ ಮಟ್ಟದಲ್ಲಿ ಸೋಂಕಿತರನ್ನ ಪತ್ತೆ ಹಚ್ಚುವ ಕಾರ್ಯ ಇಂದಿನಿಂದ ಪ್ರಾರಂಭವಾಗಲಿದ್ದು, ಪ್ರತಿ ಗ್ರಾಮಕ್ಕೆ ಒಂದೊಂದು ವಾಹನ ತೆರಳಲಿದೆ. ವಾಹನದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೊವಿಡ್ ಟೆಸ್ಟ್ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್ ಪಿಪಿಇ ಕಿಟ್ಗಳನ್ನು ನೀಡಲಾಗಿದೆ.
ವಾರದಲ್ಲಿ ಮೂರು ದಿನಗಳ ಕಾಲ ಡಾಕ್ಟರ್ಗಳೇ ಹಳ್ಳಿ ಕಡೆಗೆ ತೆರಳಿ ಗ್ರಾಮ ಮಟ್ಟದಲ್ಲಿ ಚಿಕಿತ್ಸೆ ಕೊಟ್ಟು ಸುಧಾರಣೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಡಿಸಿ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು. ರಾಜ್ಯದಲ್ಲೆ ಮೊದಲ ಬಾರಿಗೆ ದೇವನಹಳ್ಳಿಯಲ್ಲಿ ವೈದ್ಯಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ:
Karnataka Lockdown Package: ಲಾಕ್ಡೌನ್ ಪ್ಯಾಕೇಜ್ ಘೋಷಣೆ ಬಗ್ಗೆ ಸುಳಿವು ನೀಡಿದ ಕಂದಾಯ ಸಚಿವ ಆರ್.ಅಶೋಕ್
ಕೊರಾನಾ ನಿರ್ವಹಣೆಗಾಗಿ ಕಂದಾಯ ಇಲಾಖೆಯಿಂದ 305 ಕೋಟಿ ಅನುದಾನ: ಆರ್ ಅಶೋಕ್
Published On - 3:05 pm, Mon, 17 May 21