AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಶಾಲಾ ಒಕ್ಕೂಟದಿಂದ ಪ್ರತಿಭಟನೆ: SSLC ಪರೀಕ್ಷೆ ವೇಳೆ ಪ್ರತಿಭಟನೆ ಸರಿಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ

ಕೆಲವೊಂದು ಬೇಡಿಕೆಗಳ ಈಡೇರಿಕೆ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಬೇಕು. ಈ ಕುರಿತಂತೆ ಗಮನಕ್ಕೆ ತಂದಿದ್ದೇನೆ ಎಂದು ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ವಿಚಾರಕ್ಕೆ ಸಂಬಂಧಿಸಿದ ಸಭೆ ಬಳಿಕ ಎಸ್​.ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಖಾಸಗಿ ಶಾಲಾ ಒಕ್ಕೂಟದಿಂದ ಪ್ರತಿಭಟನೆ: SSLC ಪರೀಕ್ಷೆ ವೇಳೆ ಪ್ರತಿಭಟನೆ ಸರಿಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ
ಸಚಿವ ಎಸ್.ಸುರೇಶ್ ಕುಮಾರ್
shruti hegde
|

Updated on:Mar 23, 2021 | 12:43 PM

Share

ಬೆಂಗಳೂರು: ಕೆಲವೊಂದು ಬೇಡಿಕೆಗಳ ಈಡೇರಿಕೆ ಸಂಬಂಧಿಸಿ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಬೇಕಿದೆ. ಈ ಕುರಿತಂತೆ ಗಮನಕ್ಕೆ ತಂದಿದ್ದೇನೆ. SSLC ಪರೀಕ್ಷೆ ಸಂದರ್ಭ ಪ್ರತಿಭಟನೆ ಸರಿಯಲ್ಲ ಎಂದು ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಇಂದು ಮಾರ್ಚ್ 23ರಂದು ಖಾಸಗಿ ಶಾಲಾ ಒಕ್ಕೂಟದಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರ ರುಪ್ಸಾ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ ಸಭೆ ಕರೆದಿದ್ದು, ಶಾಸಕರ ಭವನದಲ್ಲಿ ಸಭೆ ಕರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸಚಿವರ ಮನೆಯ ಮುಂದೆಯೇ ಪ್ರತಿಭಟನೆ ಕೈಗೊಳ್ಳಲು ರುಪ್ಸಾ ಕರ್ನಾಟಕ ಮುಂದಾಗಿತ್ತು.

s suresh kumar meeting

ಶಾಸಕರ ಭವನದಲ್ಲಿ ಸಭೆ

ಸಭೆ ಬಳಿಕ ಮಾತನಾಡಿದ ಎಸ್.ಸುರೇಶ್ ಕುಮಾರ್, ಪರೀಕ್ಷೆಯ ವೇಳೆ ಶಾಲೆ ಬಂದ್ ಸರಿಯಲ್ಲ ಎಂದಿದ್ದೇನೆ. SSLC ಪರೀಕ್ಷೆ ಮುಗಿಯುವವರೆಗೂ ಮತ್ತೆ ಶಾಲೆ ಬಂದ್ ಮಾಡುವುದಿಲ್ಲ. ಪ್ರತಿಭಟನೆ ನಡೆಸುವುದಿಲ್ಲ ಎಂದಿದ್ದಾರೆ. ಕೆಲವೊಂದು ಬೇಡಿಕೆ ಈಡೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಯವರೆಗೆ ಪರೀಕ್ಷೆ ನಡೆಸುವ ವಿಚಾರವಾಗಿ ಸದ್ಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಪ್ರತಿಭಟನೆಗೆ ಶಿಕ್ಷಕರು ನಿರ್ಧಾರ ಮಾಡಿದ್ದರು. ಶಿಕ್ಷಣ ಸಚಿವರ ಮನೆ ಮುಂದೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಸತ್ಯಾಗ್ರಹ ಮಾಡಲು ಸಹ ತೀರ್ಮಾನಿಸಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘ, ರುಪ್ಸಾ ಕರ್ನಾಟಕ , ಕಲ್ಯಾಣ ಕರ್ನಾಟಕ, ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಶಿಕ್ಷಕರ ಸಮನ್ವಯ ಸಮಿತಿಯಿಂದ ಹೋರಾಟ ನಡೆಸಲು ಮುಂದಾಗಿದ್ದರು.

report

ಇದನ್ನೂ ಓದಿ: ಕಪ್ಪು ಪಟ್ಟಿ ಧರಿಸಿ ಮೌನ ಸತ್ಯಾಗ್ರಹ ಮಾಡಲು ಮುಂದಾದ ಶಿಕ್ಷಕರು.. ಮಾರ್ಚ್ 23ಕ್ಕೆ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಂದ ಪ್ರತಿಭಟನೆಗೆ ನಿರ್ಧಾರ

ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯನ್ನು ಖಾಲಿ ಮಾಡಿಸಲು ಮುಂದಾದ ಹುಬ್ಬಳ್ಳಿಯ ಗಾಂಧಿವಾಡ ಸೊಸೈಟಿ

Published On - 12:29 pm, Tue, 23 March 21

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​