MSIL ಮದ್ಯ ಮಳಿಗೆಯಲ್ಲಿ ಉದ್ಯೋಗಕ್ಕೆ ಸಚಿವರ ಶಿಫಾರಸ್ಸು ಪತ್ರ! ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು: ಇಬ್ಬರು ಯುವಕರಿಗೆ MSIL ಮದ್ಯದ ಅಂಗಡಿಯಲ್ಲಿ ನೌಕರಿ ನೀಡಲು ಶಿಫಾರಸು ಮಾಡಿದ್ದ ಸಚಿವರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಶಿಫಾರಸು ಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಇಬ್ಬರು ಯುವಕರಿಗೆ MSIL ಮದ್ಯ ಮಳಿಗೆಯಲ್ಲಿ ಕೆಲಸ ನೀಡುವಂತೆ ಶಿಫಾರಸು ಮಾಡಿದ್ದರು. ಈ ವಿಷಯ ತಿಳಿದ ಬೀದರ್ನ ಸೋಮನಾಥ್ ಎಂಬುವವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಚಿವರ ಕಾರ್ಯಕ್ಕೆ […]
ಬೆಂಗಳೂರು: ಇಬ್ಬರು ಯುವಕರಿಗೆ MSIL ಮದ್ಯದ ಅಂಗಡಿಯಲ್ಲಿ ನೌಕರಿ ನೀಡಲು ಶಿಫಾರಸು ಮಾಡಿದ್ದ ಸಚಿವರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಶಿಫಾರಸು ಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಇಬ್ಬರು ಯುವಕರಿಗೆ MSIL ಮದ್ಯ ಮಳಿಗೆಯಲ್ಲಿ ಕೆಲಸ ನೀಡುವಂತೆ ಶಿಫಾರಸು ಮಾಡಿದ್ದರು. ಈ ವಿಷಯ ತಿಳಿದ ಬೀದರ್ನ ಸೋಮನಾಥ್ ಎಂಬುವವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಚಿವರ ಕಾರ್ಯಕ್ಕೆ ತೀವ್ರ ಅಸಮಾಧಾನ ಹೊರಹಾಕಿದೆ.
ಸರ್ಕಾರಿ ಸಂಸ್ಥೆಗೆ ಯಾವುದೇ ರೀತಿಯ ಶಿಫಾರಸು ಪತ್ರ ಕಳಿಸುವುದು ಸರಿಯಾದ ಕ್ರಮವಲ್ಲವೆಂದು ಸಚಿವರಿಗೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಶಿಫಾರಸು ಪತ್ರವನ್ನು ಹಿಂಪಡೆಯುವುದಾಗಿ ಸಚಿವರ ಪರ ವಕೀಲ ಹೈಕೋರ್ಟಿಗೆ ಮಾಹಿತಿ ನೀಡಿದ್ದಾರೆ. ಆದರೆ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
Published On - 6:43 pm, Wed, 12 August 20