ಮುಷ್ಕರದ ಬಿಸಿ ಆರುತ್ತಿದ್ದಂತೆ.. ಸಾರಿಗೆ ನೌಕರರು ಅಮಾನತು: ನೌಕರರು ಫುಲ್ ಗರಂ, ಮತ್ತೆ ಹೋರಾಟದ ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 18, 2020 | 1:43 PM

ಮುಷ್ಕರ ನಡೆಸಿ ಸಂಸ್ಥೆಗೆ ಭಾರಿ ನಷ್ಟ ಉಂಟುಮಾಡಿದ್ದಾರೆಂಬ ನೆಪವೊಡ್ಡಿ ನಾಲ್ಕೂ ನಿಗಮಗಳಿಂದ ಹೊಸ ಅಸ್ತ್ರ ಪ್ರಯೋಗವಾಗಿದೆ. ಸುಮಾರು 200 ಮಂದಿಯನ್ನು ಅಮಾನತು ಗೊಳಿಸಿದ್ದು, ಆಡಳಿತ ವರ್ಗದ ಕ್ರಮಕ್ಕೆ ನೌಕರರು ಸಿಡಿದೆದ್ದಿದ್ದಾರೆ.

ಮುಷ್ಕರದ ಬಿಸಿ ಆರುತ್ತಿದ್ದಂತೆ.. ಸಾರಿಗೆ ನೌಕರರು ಅಮಾನತು: ನೌಕರರು ಫುಲ್ ಗರಂ, ಮತ್ತೆ ಹೋರಾಟದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಬಿಸಿ ಆರುತ್ತಿದ್ದಂತೆ ಪ್ರತಿಭಟನೆಯಲ್ಲಿ ಭಾಗಿಯಾದ ನೌಕರರನ್ನು ಏಕಾಏಕಿ ಅಮಾನತು ಗೊಳಿಸಲಾಗಿದೆ.

ಮುಷ್ಕರ ನಡೆಸಿ ಸಂಸ್ಥೆಗೆ ಭಾರಿ ನಷ್ಟ ಉಂಟುಮಾಡಿದ್ದಾರೆಂಬ ನೆಪವೊಡ್ಡಿ ನಾಲ್ಕೂ ನಿಗಮಗಳಿಂದ ಹೊಸ ಅಸ್ತ್ರ ಪ್ರಯೋಗವಾಗಿದೆ. ಸುಮಾರು 200 ಮಂದಿಯನ್ನು ಅಮಾನತು ಗೊಳಿಸಿದ್ದು, ಆಡಳಿತ ವರ್ಗದ ಕ್ರಮಕ್ಕೆ ನೌಕರರು ಸಿಡಿದೆದ್ದಿದ್ದಾರೆ.

ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಿದ್ರೆ ಅಮಾನತು ಎಷ್ಟು ಸರಿ. ಇದ್ದಕ್ಕಿದ್ದಂತೆ ಹೀಗೆ ಅಮಾನತುಗೊಳಿಸುವುದು ತಪ್ಪು. ಸಾರಿಗೆ ಸಚಿವರ ಇಲಾಖೆ ಕಾರ್ಯವೈಖರಿ ಸರಿಯಲ್ಲ. ಸಚಿವರ ಗಮನಕ್ಕೆ ತರದೆ ಅಧಿಕಾರಿಗಳು ಅಮಾನತು ಮಾಡಿರಬಹುದು. ಕೂಡಲೇ ಅಮಾನತು ಆದೇಶ ಹಿಂಪಡೆಯದಿದ್ದರೆ ಮತ್ತೆ ಹೋರಾಟಕ್ಕೆ ಇಳಿಯುತ್ತೇವೆಂದು ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.

ಅಮಾನತು ಆದೇಶ

ಮುಷ್ಕರ ಮುಂದುವರಿಯಲಿದೆ, ಯಾರೂ ಬಸ್​ ತೆಗೆಯಬೇಡಿ -ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು

Published On - 1:29 pm, Fri, 18 December 20