ಬೆಂಗಳೂರು ಗ್ರಾಮಾಂತರ SP ಚನ್ನಣ್ಣನವರ್ಗೆ ಕರೆ ಮಾಡಿ.. THO ಮಂಜುನಾಥ್ ಹೇಳಿದ್ದೇನು?
ಇದಿಷ್ಟನ್ನೂ ಬೆಂಗಳೂರು ಗ್ರಾಮಾಂತರ SP ರವಿ ಚನ್ನಣ್ಣನವರ್ ಅವರಿಗೆ ಕರೆ ಮಾಡಿ ಹೇಳಿದ್ದೆ ಎಂದು ಮೂರು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಭಾವಿಸಲಾಗಿದ್ದ ಹೊಸಕೋಟೆಯ THO ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ .
ನೆಲಮಂಗಲ: ಮೂರು ದಿನ ನಾನೇನೂ ಫೋನ್ ಸ್ವಿಚ್ಡ್ ಆಫ್ ಮಾಡಿರಲಿಲ್ಲ. ಜೊತೆಗೆ ಯಾವುದೇ ರೀತಿಯ ನ್ಯೂಸ್ ಸಹ ನೋಡಿರಲಿಲ್ಲ. ಹಾಗಾಗಿ ನಿನ್ನೆ ರಾತ್ರಿಯಷ್ಟೇ.. ಹಾಸನದಲ್ಲಿದ್ದಾಗ ಸದ್ಯದ ಬೆಳವಣಿಗೆಯ ಬಗ್ಗೆ ನನಗೆ ತಿಳಿಯಿತು. ನನ್ನ ಸಹೋದ್ಯೋಗಿಗಳು ಕಣ್ಣಲ್ಲಿ ನೀರು ಹಾಕಿದ್ದು ನೋಡಲಾಗಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ನೆಲಮಂಗಲಕ್ಕೆ ಬಂದಿದ್ದೇನೆ. ಇದಿಷ್ಟನ್ನೂ ಬೆಂಗಳೂರು ಗ್ರಾಮಾಂತರ SP ರವಿ ಚನ್ನಣ್ಣನವರ್ ಅವರಿಗೆ ಕರೆ ಮಾಡಿ ಹೇಳಿದ್ದೆ ಎಂದು ಮೂರು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಭಾವಿಸಲಾಗಿದ್ದ ಹೊಸಕೋಟೆಯ THO ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ .
ಇದೇ ವೇಳೆ ನಾಪತ್ತೆಯಾಗಿದ್ದ ಬಗ್ಗೆ ಪ್ರತಿಕ್ರಿಯಿಸಿ ನನ್ನ ಕಚೇರಿಗೆ ಯಾರೋ ಬಂದು ಗಲಾಟೆ ಮಾಡಿದ್ದರು. ಬಳಿಕ ಠಾಣೆಯಲ್ಲಿ ಗಲಾಟೆ ವಿಚಾರ ರಾಜಿಯಾಯಿತು. ಅದಾದಮೇಲೆ ನನ್ನ ಕಾರಿಗೆ ಅಡ್ಡ ಹಾಕಿ, ಜೀವ ಬೆದರಿಕೆ ಹಾಕಿದ್ದರು. ಹೀಗಾಗಿ ಬೇಜಾರಾಗಿ 2-3 ದಿನ ಹೊರಗಡೆ ಹೋಗಿದ್ದೆ ಎಂದೂ THO ಮಂಜುನಾಥ್ ಹೇಳಿದ್ದಾರೆ.
‘ವಿಷಯ ತಿಳಿದು ಎಸ್‌ಪಿಗೆ ಕರೆ ಮಾಡಿ ಬರುತ್ತಿದ್ದೇನೆಂದಷ್ಟೇ ತಿಳಿಸಿದ್ದೆ’ ನಂತರ ಏನೆಲ್ಲಾ ನಡೆದಿದೆ ಎಂದು ನಿಮಗೆ ಗೊತ್ತಿರುವ ವಿಚಾರ. ಮೊದಲು ನಾನು ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದೆ. ಬಳಿಕ ರಾಮನಗರ, ಮಂಗಳೂರಿಗೆ ಹೋಗಿದ್ದೆ. ಬಳಿಕ ಹಾಸನಕ್ಕೆ ಬಂದಾಗ ವಿಷಯ ತಿಳಿದು ಎಸ್‌ಪಿಗೆ ಕರೆ ಮಾಡಿ ಬರುತ್ತಿದ್ದೇನೆಂದಷ್ಟೇ ತಿಳಿಸಿದ್ದೆ. ಮತ್ತೆ ನನ್ನ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡೆ ಅಷ್ಟೆ. ಟೋಲ್ ಬಳಿ ಹಿರಿಸಾವೆ ಪೊಲೀಸರು ನನ್ನ ಜೊತೆ ಬಂದರು ಎಂದು THO ಮಂಜುನಾಥ್ ಹೇಳಿದರು.
ಜಯರಾಜ್ ಧಮ್ಕಿಯಿಂದ ನನ್ನ ಸಹೋದರ ನೊಂದಿದ್ದರು ಎಂದು THO ಮಂಜುನಾಥ್ ಸಹೋದರ ರಾಘವೇಂದ್ರ ಹೇಳಿದರು. ಅಧಿಕಾರಿಗಳ ಬಳಿ ಒಬ್ಬ ಚೇಲಾ ಬಂದು ಮಾತನಾಡಿದ್ದಾನೆ. ಕೆಟ್ಟದಾಗಿ ಮಾತಾಡಿದ್ದಾನೆಂದು ನನ್ನ ಸಹೋದರ ನೊಂದಿದ್ದರು ಎಂದು ಹೊಸಕೋಟೆ THO ಮಂಜುನಾಥ್ ಸಹೋದರ ರಾಘವೇಂದ್ರ ಹೇಳಿದರು.
ಅಂದ ಹಾಗೆ, ಡಿ.15ರಿಂದ ಕಳೆದ 3 ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಭಾವಿಸಲಾಗಿದ್ದ ಹೊಸಕೋಟೆಯ THO ಮಂಜುನಾಥ್‌ರನ್ನು ಪೊಲೀಸರು ನೆಲಮಂಗಲ ಟೌನ್ ಠಾಣೆಗೆ ಕರೆತಂದರು. ಇದೇ ವೇಳೆ, ಪೊಲೀಸರು ಅಧಿಕಾರಿ ಎಲ್ಲೆಲ್ಲಿ ಹೋಗಿದ್ದರು ಮತ್ತು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದರು. ಈ ವೇಳೆ, ಮಂಜುನಾಥ್ರ ಮೇಲೆ ಪ್ರಭಾವಿ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಮಂಜುನಾಥ್ ದೂರು ನೀಡದಂತೆ ಮನವೊಲಿಸಲು ಹಿರಿಯ ಅಧಿಕಾರಿಗಳ ಮೇಲೆ ಕೆಲ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಸಹ ಕೇಳಿಬಂತು.
‘ಮಂಜುನಾಥ್‌ರನ್ನು ನಮ್ಮ ಸಮ್ಮುಖದಲ್ಲಿ ವಿಚಾರಣೆ ಮಾಡಿ’ ಬಿಜೆಪಿ ಎಂಎಲ್ಸಿ MTB ನಾಗರಾಜ್ ಆಪ್ತ ಜಯರಾಜ್ ಅಧಿಕಾರಿಗೆ ಬೆದರಿಕೆ ಒಡ್ಡಿದ್ದರು ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಹಾಗಾಗಿ, ಇದರಿಂದ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಎಂಎಲ್ಸಿ MTB ನಾಗರಾಜ್‌ಗೆ ಹಿನ್ನಡೆಯಾಗುವ ಸಾಧ್ಯತೆ ಎದುರಾದ ಹಿನ್ನೆಲೆಯಲ್ಲಿ ಯಾವುದೇ ದೂರು ನೀಡದಂತೆ THO ಮನವೊಲಿಕೆ ಮಾಡಗುತ್ತಿದೆ ಎಂದು ಮಂಜುನಾಥ್ ಕುಟುಂಬಸ್ಥರು ಆರೋಪಿಸಿದರು.
ಹಾಗಾಗಿ, ಮಂಜುನಾಥ್‌ರನ್ನು ನಮ್ಮ ಸಮ್ಮುಖದಲ್ಲಿ ವಿಚಾರಣೆ ಮಾಡಿ ಎಂದು THO ಕುಟುಂಬಸ್ಥರು ಮನವಿ ಮಾಡಿದರು. 3 ದಿನದಿಂದ ಮಂಜುನಾಥ್ ಸಾಕಷ್ಟು ಮನನೊಂದಿದ್ದಾರೆ. ಸದ್ಯ ಆರೋಗ್ಯಾಧಿಕಾರಿ ಮಂಜುನಾಥ್‌ಗೆ ಧೈರ್ಯ ಬೇಕಾಗಿದೆ. ಹೀಗಾಗಿ, ಕುಟುಂಬಸ್ಥರ ಸಮ್ಮುಖದಲ್ಲಿಯೇ ವಿಚಾರಣೆ ಮಾಡಿ ಎಂದು ಟಿವಿ9 ಮೂಲಕ THO ಮಂಜುನಾಥ್ ಸಹೋದರ ಮನವಿ ಮಾಡಿದರು.
ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಕ್ಕೆ MTB ಆಪ್ತನಿಂದ ಧಮ್ಕಿ.. ಮನನೊಂದು ಹೊಸಕೋಟೆ THO ನಾಪತ್ತೆ
Published On - 12:55 pm, Fri, 18 December 20