ಚಿಕ್ಕಮಗಳೂರಲ್ಲಿ ಅಪ್ರಾಪ್ತೆ ಮೇಲೆ ಕಾಮಂಧರ ಕ್ರೌರ್ಯ: ಬಾಲಕಿಯ ಚಿಕ್ಕಮ್ಮ ಸೇರಿದಂತೆ 14 ಜನರ ಮೇಲೆ FIR

|

Updated on: Jan 31, 2021 | 11:41 AM

ಈ ನೀಚ ತನ್ನ ಸ್ನೇಹಿತರು, ಪರಿಚಿತರಿಂದಲೂ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ. ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಳು. ಸದ್ಯ ಚಿಕ್ಕಮ್ಮ ಸೇರಿದಂತೆ ಹದಿನಾಲ್ಕು ಮಂದಿ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರಲ್ಲಿ ಅಪ್ರಾಪ್ತೆ ಮೇಲೆ ಕಾಮಂಧರ ಕ್ರೌರ್ಯ: ಬಾಲಕಿಯ ಚಿಕ್ಕಮ್ಮ ಸೇರಿದಂತೆ 14 ಜನರ ಮೇಲೆ FIR
ಪ್ರಾತಿನಿಧಿಕ ಚಿತ್ರ
Follow us on

ಚಿಕ್ಕಮಗಳೂರು: 15 ವರ್ಷದ ಅಪ್ರಾಪ್ತೆ ಮೇಲೆ 30 ಜನರಿಂದ ಅತ್ಯಾಚಾರವೆಸಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಸೆಪ್ಟೆಂಬರ್ 2020ರಿಂದ ಬಾಲಕಿಯನ್ನು ಬ್ಲಾಕ್ ಮೇಲ್ ಮಾಡಿ ನಿರಂತರ ಅತ್ಯಾಚಾರ ಮಾಡಲಾಗಿದೆ. ಬಾಲಕಿಯನ್ನು ಅತ್ಯಾಚಾರ ಮಾಡಿ, ವಿಡಿಯೋ ಮಾಡಿಟ್ಟುಕೊಂಡಿದ್ದ ವ್ಯಕ್ತಿ, ಬಾಲಕಿಗೆ ಅತ್ಯಾಚಾರದ ವಿಡಿಯೋ ತೋರಿಸಿ, ಬ್ಲಾಕ್ ಮೇಲ್ ಮಾಡಿ, ನಿರಂತರವಾಗಿ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

ಈ ನೀಚ ತನ್ನ ಸ್ನೇಹಿತರು, ಪರಿಚಿತರಿಂದಲೂ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ. ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಳು. ಸದ್ಯ ಚಿಕ್ಕಮ್ಮ ಸೇರಿದಂತೆ ಹದಿನಾಲ್ಕು ಮಂದಿ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಈಗಾಗಲೇ ಬಾಲಕಿಯ ಚಿಕ್ಕಮ್ಮ ಸೇರಿದಂತೆ ಎಂಟು ಮಂದಿಯ ಬಂಧನವಾಗಿದೆ. ಚಿಕ್ಕಮಗಳೂರಿನ ಸಾಂತ್ವಾನ ಕೇಂದ್ರದಲ್ಲಿ ಬಾಲಕಿ ಆಶ್ರಯ ಪಡೆದಿದ್ದಾಳೆ.

ನಾಪತ್ತೆಯಾಗಿದ್ದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ: ಯುವಕನ ಮೇಲೆ ಅತ್ಯಾಚಾರ ಆರೋಪ