ಗ್ರಾಮ ಪಂಚಾಯಿತಿ ಚುನಾವಣೆ ವೈಷಮ್ಯ; ರೈತನ ಜೋಳದ ತೆನೆ ಕಳವು ಮಾಡಿದ ಕಿಡಿಗೇಡಿಗಳು

| Updated By: ರಾಜೇಶ್ ದುಗ್ಗುಮನೆ

Updated on: Dec 29, 2020 | 9:11 PM

ಗ್ರಾಮದ ಮಂಜುನಾಥ್​ ಎಂಬುವರು, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಸಂಬಂಧಿಯ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಕೆಲವರು, ಮಂಜುನಾಥ್​ ಹೊಲಕ್ಕೆ ನುಗ್ಗಿ ಜೋಳದ ತೆನೆಗಳನ್ನು ಕಳವು ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ವೈಷಮ್ಯ; ರೈತನ ಜೋಳದ ತೆನೆ ಕಳವು ಮಾಡಿದ ಕಿಡಿಗೇಡಿಗಳು
ಹೊಲದಲ್ಲಿರುವ ಜೋಳದ ತೆನೆ ಕಳವು
Follow us on

ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಂಬಂಧಿಯೋರ್ವರ ಪರ ಪ್ರಚಾರ ಮಾಡಿದ್ದ ವ್ಯಕ್ತಿಯ ಜಮೀನಿನಲ್ಲಿದ್ದ ಜೋಳವನ್ನು ಕಳವು ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜುನಾಥ್​ ಎಂಬುವರು, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಸಂಬಂಧಿಯ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಕೆಲವರು, ಮಂಜುನಾಥ್​ ಹೊಲಕ್ಕೆ ನುಗ್ಗಿ ಜೋಳದ ತೆನೆಗಳನ್ನು ಕಳವು ಮಾಡಿದ್ದಾರೆ. ಹಾಗೇ ಉಳಿದ ಜೋಳದ ಗಿಡಗಳನ್ನೂ ನಾಶ ಮಾಡಿದ್ದಾರೆ. ಕಳೆದ ಭಾನುವಾರ ಘಟನೆ ನಡೆದಿದೆ ಎಂದು ಹೇಳಿರುವ ಮಂಜುನಾಥ್​, ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಹುಡುಕಿ, ನ್ಯಾಯ ಒದಗಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

ರಾಜಕೀಯಕ್ಕೆ ಗುಡ್​ಬೈ ಹೇಳಿದ ರಜನಿಕಾಂತ್! ‘ರಾಜಕೀಯಕ್ಕೆ ಇಳಿಯದೆಯೂ ನಾನು ಜನರ ಸೇವೆ ಮಾಡಬಲ್ಲೆ..’