ಮಂಡ್ಯ: ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಎಂ.ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಚುನಾವಣಾ ಅಭ್ಯರ್ಥಿ ತಮ್ಮಣ್ಣ ಮೇಲೆ ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ. ಮತಗಟ್ಟೆ ಬಳಿಯಿದ್ದ ತಮ್ಮಣ್ಣರಿಗೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ.
ಮತ ಚಲಾಯಿಸಲು ಆಗಮಿಸಿದ್ದ ವೇಳೆ ತಮ್ಮಣ್ಣ ಮೇಲೆ ಹಲ್ಲೆಯಾಗಿದೆ ಎಂದು ಗ್ರಾಮದ ಎಸ್.ಆರ್ ಲೊಕೇಶ್ ಮತ್ತು ನಂಜೇಗೌಡ ಆರೋಪ ಮಾಡಿದ್ದಾರೆ. ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಳೆ ಹೋಗಿದ್ದ ಮತದಾರರಿಗೆ 1 ದಿನದ ರಾಜ ಮರ್ಯಾದೆ: ಊಟೋಪಚಾರದ ಜೊತೆ ಖರ್ಚು ವೆಚ್ಚ ಭರಿಸಿದ ಅಭ್ಯರ್ಥಿಗಳು