
ವಿಜಯಪುರ: ನಿಮಗೆ ಬೆಂಗಳೂರಿನಿಂದ ಕರೆ ಬಂದಿಲ್ವಾ ಎಂಬ ಪ್ರಶ್ನೆಗೆ ಬೆಂಗಳೂರಲ್ಲಿ ನಮ್ಮದೇನೈತ್ರಿ ಕೆಲಸ, ನಮ್ಮ ಕರೆನ್ಸಿ ಖಾಲಿ ಆಗಿದೆ ಎಂದು ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಎಲ್ಲಾ ಕರೆನ್ಸಿ ಕಟ್ ಆಗಿದೆ ಏನು ಮಾಡೋದು ಎಂದು ಬೇಸರವಾಗಿದೆ. ಹೀಗಾಗಿ, ಸಂಕ್ರಮಣ ಜಾತ್ರೆ ಇದೆ, ನಾನೀಗ ಆ ಕೆಲಸದಲ್ಲಿದ್ದೇನೆ ಎಂದು ಯತ್ನಾಳ್ ಹೇಳಿದರು. ಇದೀಗ, ಯತ್ನಾಳ್ ಹೇಳಿಕೆಯಿಂದ ಸಿಎಂ ಯಡಿಯೂರಪ್ಪರ ಬಳಿಯಿರುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಶಾಸಕರ ಹೆಸರು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಏಳೆಂಟು ಸಚಿವರು ನಾಳೆ 3.50ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಾರೆ -ಸಿಎಂ ಬಿ.ಎಸ್. ಯಡಿಯೂರಪ್ಪ
Published On - 7:56 pm, Tue, 12 January 21