10 ತಿಂಗಳ ಬಳಿಕ ಕಾಲೇಜಿಗೆ ಮರಳಿದ ವಿದ್ಯಾರ್ಥಿಗಳ ಮೇಲೆ ಹೂ ಚೆಲ್ಲಿ ಅದ್ಧೂರಿ ಸ್ವಾಗತ ಕೋರಿದ JDS ಶಾಸಕ!

|

Updated on: Jan 01, 2021 | 12:04 PM

ಮೇಲುಕೋಟೆ ಕ್ಷೇತ್ರದ JDS ಶಾಸಕ ಪುಟ್ಟರಾಜು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿರೊ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಆದರದಿಂದ ಸ್ವಾಗತಿಸಿದ್ದು ಬಲಗಾಲಿಟ್ಟು ಒಳಗೆ ಹೋಗಿ ಎಂದು ಶುಭಹಾರೈಸಿದ್ರು.

10 ತಿಂಗಳ ಬಳಿಕ ಕಾಲೇಜಿಗೆ ಮರಳಿದ ವಿದ್ಯಾರ್ಥಿಗಳ ಮೇಲೆ ಹೂ ಚೆಲ್ಲಿ ಅದ್ಧೂರಿ ಸ್ವಾಗತ ಕೋರಿದ JDS ಶಾಸಕ!
ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದ ಶಾಸಕ ಸಿ.ಎಸ್. ಪುಟ್ಟರಾಜು
Follow us on

ಮಂಡ್ಯ: ಮಹಾಮಾರಿ ಕೊರೊನಾದಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟ ಶಾಲಾ-ಕಾಲೇಜುಗಳು 10 ತಿಂಗಳ ಬಳಿಕ ಇಂದು ಮತ್ತೆ ತೆರೆಯುತ್ತಿವೆ. ಕೊರೊನಾದ ಮುಂಜಾಗ್ರತಾ ಕ್ರಮಗಳ ಜೊತೆ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಇಂದಿನಿಂದ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಸಿ.ಎಸ್. ಪುಟ್ಟರಾಜು ತರಗತಿಗೆ ಬರಮಾಡಿಕೊಂಡಿದ್ದಾರೆ.

ಥಮ್ಸ್​ಅಪ್​ ಮಾಡಿ ಶುಭ ಕೋರಿದ ಶಾಸಕ
ಮೇಲುಕೋಟೆ ಕ್ಷೇತ್ರದ JDS ಶಾಸಕ ಪುಟ್ಟರಾಜು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿರೊ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಆದರದಿಂದ ಸ್ವಾಗತಿಸಿದ್ದು ಬಲಗಾಲಿಟ್ಟು ಒಳಗೆ ಹೋಗಿ ಎಂದು ಶುಭ ಹಾರೈಸಿದ್ರು. ಶಾಸಕರಿಂದಾದ ಗ್ರ್ಯಾಂಡ್ ವೆಲ್ಕಮ್​ಗೆ ವಿದ್ಯಾರ್ಥಿಗಳು ಫುಲ್ ಖುಷ್ ಆದ್ರೂ.

ಈ ಸರ್ಕಾರಿ ಪಿಯು ಕಾಲೇಜಿನಲ್ಲಿ ಸುಮಾರು 600 ಜನ ವಿದ್ಯಾರ್ಥಿಗಳಿದ್ದಾರೆ. ಹೈಸ್ಕೂಲ್ ವಿಭಾಗದಲ್ಲಿ 200, ಪಿಯು ವಿಭಾಗದಲ್ಲಿ 400 ಜನ ವಿದ್ಯಾಭ್ಯಾಸ ಮಾಡ್ತಿದ್ದಾರೆ.

ಹತ್ತು ತಿಂಗಳ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದು ತಮ್ಮ ಸ್ನೇಹಿತರನ್ನು, ಕೊಠಡಿ, ಶಿಕ್ಷಕರನ್ನು ನೋಡಿ ಸಂತಸಗೊಂಡಿದ್ದಾರೆ. ಹಾಗೂ ಗುರುಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಹೊಸ ವರ್ಷಕ್ಕೆ ಮನ ಗೆಲ್ಲುವ ಅಲಂಕಾರದಲ್ಲಿ ನಿಮಿಷಾಂಬ ದೇವಾಲಯ

Published On - 11:38 am, Fri, 1 January 21