ಹೊಸ ವರ್ಷಕ್ಕೆ ಮನ ಗೆಲ್ಲುವ ಅಲಂಕಾರದಲ್ಲಿ ನಿಮಿಷಾಂಬ ದೇವಾಲಯ
2021ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಿಮಿಷಾಂಬ ದೇವಿಗೆ ಸ್ವರ್ಣಮಯ ಅಲಂಕಾರ ಮಾಡಲಾಗಿದೆ. ಚಿನ್ನದ ಅಲಂಕಾರದಲ್ಲಿ ತಾಯಿ ಕಂಗೊಳಿಸ್ತಿದ್ದಾಳೆ.
ಮಂಡ್ಯ: ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿರೋ ನಿಮಿಷಾಂಬ ದೇವಾಲಯದಲ್ಲಿ ಇಂದು ಹಬ್ಬದ ಸಂಭ್ರಮ ಮನೆ ಮಾಡಿದೆ. 2021ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಿಮಿಷಾಂಬ ದೇವಿಗೆ ಸ್ವರ್ಣಮಯ ಅಲಂಕಾರ ಮಾಡಲಾಗಿದೆ. ಚಿನ್ನದ ಅಲಂಕಾರದಲ್ಲಿ ತಾಯಿ ಕಂಗೊಳಿಸ್ತಿದ್ದಾಳೆ.
ಈ ತಾಯಿ ಭಕ್ತಿಗೆ ನಿಮಿಷದಲ್ಲಿ ಒಲಿಯುತ್ತಾಳೆ ಅನ್ನೋ ನಂಬಿಕೆ ಇದೆ. ಕೊರೊನಾ ಮಹಾಮಾರಿಯಿಂದಾಗಿ 2020 ಕರಾಳ ವರ್ಷವಾಯ್ತು. ಆದರೆ ಈ ಬಾರಿ ಹೊಸ ಹೊಸ ನಿರೀಕ್ಷೆ, ಹುರುಪಿನಿಂದ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದು ಜನ ತಾಯಿಯಲ್ಲಿ ಭಕ್ತ ಪರವಶತೆಯಿಂದ ವರ್ಷವನ್ನು ಹರುಷದಿಂದ ತುಂಬುವಂತೆ ಮೊರೆ ಇಟ್ಟಿದ್ದಾರೆ. ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಹೊಸ ವರ್ಷ ಹಿನ್ನೆಲೆ ಭಕ್ತರು ದೇವಿ ದರ್ಶನಕ್ಕೆ ಬರ್ತಿದ್ದಾರೆ.
ಇನ್ನು ಬೆಂಗಳೂರಿನ ದೇವಾಲಯಗಳಲ್ಲೂ ಇದೇ ರೀತಿಯ ಚಿತ್ರಣ ಕಂಡು ಬಂದಿದೆ. ಐತಿಹಾಸಿಕ ಬನಶಂಕರಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದ್ದು ಹೊಸ ವರ್ಷದ ಮೊದಲ ದಿನ ದೇಗುಲಗಳಲ್ಲಿ ಭಕ್ತ ಸಾಗರವೇ ಹರಿದು ಬರ್ತಿದೆ.