AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರನ ಬೇಜವಾಬ್ದಾರಿತನ, ಧೂಳು ತುಂಬಿದ ರಸ್ತೆಯಿಂದ ಮಂಕಾಗುತ್ತಿದೆ ಜನ ಜೀವನ..

ಆ ಐತಿಹಾಸಿಕ ಗ್ರಾಮದ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹೆದ್ದಾರಿ ಗುತ್ತಿಗೆದಾರನ ಬೇಜವಾಬ್ದಾರಿಗೆ ಹೋಟೆಲ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕೊರೊನಾ ಹೊಡೆತಕ್ಕೆ ಸಿಲುಕಿ ವ್ಯಾಪಾರ ಇಲ್ಲದೇ ಕಂಗಾಲಾದ ವ್ಯಾಪಾರಸ್ಥರಿಗೆ ನಿತ್ಯ ಧೂಳಿನ ಸ್ನಾನವಾಗುತ್ತಿದೆ.

ಗುತ್ತಿಗೆದಾರನ ಬೇಜವಾಬ್ದಾರಿತನ, ಧೂಳು ತುಂಬಿದ ರಸ್ತೆಯಿಂದ ಮಂಕಾಗುತ್ತಿದೆ ಜನ ಜೀವನ..
ಧೂಳಿನಿಂದ ತುಂಬಿದ ರಸ್ತೆ
ಆಯೇಷಾ ಬಾನು
|

Updated on: Jan 01, 2021 | 8:11 AM

Share

ಗದಗ: ಧೂಳು.. ಧೂಳು.. ಧೂಳು.. ಎಲ್ಲೆಲ್ಲೂ ದೂಳು. ಎಲ್ಲಿ ನೋಡಿದ್ರು ಧೂಳು. ಇಲ್ಲಿ ವಾಸಿಸುವ ಜನರಿಗೆ ದಿನನಿತ್ಯ ನರಕದರ್ಶನವಾಗುತ್ತಿರುವ ಜೊತೆಗೆ ಧೂಳಿನ ಸ್ನಾನವೂ ಫುಲ್ ಫ್ರೀ ಎನ್ನುವಂತಾಗಿದೆ. ಅಷ್ಟಕ್ಕೂ ಈ ಕಿರಿಕಿರಿಗೆ ಕಾರಣ ಆಗಿರೋದು ಮಾತ್ರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತಿಗೆದಾರನ ಬೇಜವಾಬ್ದಾರಿತನದಿಂದ.

ಇದು ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಜನ್ರ ಗೋಳಿನ ಕಥೆ. ಗದಗ ಜಿಲ್ಲಾ ಕೇಂದ್ರದಿಂದ 12ಕಿಲೋ ಮೀಟರ್ ದೂರದಲ್ಲಿದೆ ಈ ಗ್ರಾಮ. ಆದ್ರೆ ಇಲ್ಲಿನ ಜನ್ರ ಗೋಳು ಮಾತ್ರ ಜಿಲ್ಲಾಡಳಿತಕ್ಕೆ ಕೇಳ್ತಿಲ್ಲ. ಲಕ್ಕುಂಡಿ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿದೆ. ಹೀಗಾಗಿ ಎಲ್ಲ ವಾಹಗಳ ಸಂಚಾರ ಗ್ರಾಮದಲ್ಲಿ ಡೈವರ್ಟ್ ಮಾಡಲಾಗಿದೆ. ಗ್ರಾಮದಲ್ಲಿ ರಸ್ತೆ ಕೂಡ ಸಂಪೂರ್ಣ ಹದಗೆಟ್ಟಿದೆ.

ಉಪಹಾರ ಸೇರ್ತ್ತಿದೆ ಧೂಳು ಲಾರಿ, ಬಸ್​ಗಳು ಸೇರಿದಂತೆ ನಿತ್ಯ ಸಾವಿರ ಸಾವಿರ ವಾಹನಗಳು ಸಂಚಾರ ಮಾಡುತ್ತವೆ. ಗುತ್ತಿಗೆದಾರ ಧೂಳು ಏಳದಂತೆ ನಿತ್ಯ ಮೂರು ಬಾರಿ ರಸ್ತೆಗೆ ನೀರು ಹಾಕಬೇಕು. ಆದ್ರೆ, ಬೆಳಗ್ಗೆ 1 ಬಾರಿ ಕಾಟಾಚಾರಕ್ಕೆ ಅಂತಾ ನೀರು ಸುರಿದು ಸುಮ್ಮನಾಗುತ್ತಿದ್ದಾರಂತೆ. ಹೀಗಾಗಿ ಗ್ರಾಮ ಧೂಳಿನಿಂದಲೇ ಆವರಿಸಿದೆ. ಅದ್ರಲ್ಲೂ ಇಲ್ಲಿನ ಬಸ್ ನಿಲ್ದಾಣ ಸಮೀಪದಲ್ಲಿ ರಸ್ತೆ ಅಕ್ಕಪಕ್ಕದಲ್ಲೇ ಹತ್ತಾರು ಹೋಟೆಲ್​ಗಳಿವೆ. ವಾಹನ ಸಂಚರಿಸುವ ವೇಳೆ ಧೂಳು ನೇರವಾಗಿ ಹೋಟೆಲ್​ನ ಉಪಹಾರ ಸೇರ್ತ್ತಿದೆ. ಮೊದ್ಲೇ ಕೊರೊನಾ ಕಂಟಕದಿಂದ ಕಂಗೆಟ್ಟ ವ್ಯಾಪರಸ್ಥರು ಈಗ ಚೇತರಿಸಿಕೊಳ್ಳುತ್ತಿದ್ರು. ಆದ್ರೆ ಈ ಧೂಳು ಮತ್ತೆ ಮಾಲೀಕರನ್ನು ಕಂಗಾಲಾಗಿಸಿದೆ.

ಹೋಟೆಲ್ ಚೆನ್ನಾಗಿ ನಡೆದ್ರೆ ಮಾಲೀಕರ ಬದುಕು ಸಾಗುತ್ತೆ. ಈ ನಡುವೆ ‘ಕೊರೊನಾ’ದಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಮಾಲೀಕರಿಗೆ ಧೂಳು ಕಂಟಕವಾಗಿ ಪರಿಣಮಿಸಿದೆ. ವ್ಯಾಪಾರ ಪೂರ್ಣ ಕುಸಿದು ಹೋಗುತ್ತಿದೆ. ಗುತ್ತಿಗೆದಾರ ರಸ್ತೆಗೆ ಸುರಿಸುತ್ತಿರುವ ನೀರು ಕೂಡ ಕೆಟ್ಟ ವಾಸನೆಯಿಂದ ಕೂಡಿದ್ದು, ಜನರು ಪರದಾಡುತ್ತಿದ್ದಾರೆ.

ಒಟ್ನಲ್ಲಿ ಇಷ್ಟು ದಿನ ಒಂದು ಕಾಟ, ಈಗ ನೋಡಿದ್ರೆ ಮತ್ತೊಂದು ಪರದಾಟ ಎನ್ನುವಂತಾಗಿದೆ ಲಕ್ಕುಂಡಿ ಜನ್ರ ಪರಿಸ್ಥಿತಿ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲ ಅಂದ್ರೆ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿ ಮೊದಲೇ ಪರದಾಡುತ್ತಿರುವ ಹೋಟೆಲ್ ಮಾಲೀಕರ ಅನ್ನಕ್ಕೂ ಕಲ್ಲು ಬೀಳುವ ಸ್ಥಿತಿ ಎದುರಾಗಲಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಅಲರ್ಟ್ ಆಗಬೇಕಿದೆ.

ವೈದ್ಯರ ದಿವ್ಯ ನಿರ್ಲಕ್ಷ್ಯ: MRI ಸ್ಕ್ಯಾನಿಂಗ್ ವೇಳೆ ಪತ್ನಿಯ ಎದುರೇ ಹಾರಿ ಹೋಯ್ತು ಪತಿಯ ಜೀವ..

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ