ಇಂದು ಹನುಮಮಾಲೆ ವಿಸರ್ಜನೆ ದಿನ, ಅಂಜನಾದ್ರಿ ಬೆಟ್ಟದಲ್ಲಿ ಜನಾರ್ಧನರೆಡ್ಡಿಯಿಂದ ಹನುಮನಿಗೆ ಪೂಜೆ

|

Updated on: Dec 13, 2024 | 10:25 AM

ನಮ್ಮ ಕೊಪ್ಪಳ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಹನುಮಮಾಲೆ ವಿಸರ್ಜನೆ ದಿವಾಗಿರುವ ಇಂದು ಮಾಲೆ ಧರಿಸಿರುವ ಕೊಪ್ಪಳ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಭಕ್ತರು ಬೆಳಗಿನ ಜಾವದಿಂದಲೇ ಅಂಜನಾದಿ ಬೆಟ್ಟಕ್ಕೆ ಅಗಮಿಸಿ ಮಾಲೆ ವಿಸರ್ಜನೆ ಮಾಡಿದರು. ಮಾಲೆ ಧರಿಸುವ ಭಕ್ತರು ಬರಿಮೈಯಲ್ಲಿ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆ ಮಾಡಬೇಕು. ಬೆಟ್ಟದ ಮೇಲೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಭಕ್ತರು ವ್ರತವನ್ನು ಪೂರೈಸಿದರು.

ಕೊಪ್ಪಳ: ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರು ದೈವಭಕ್ತ ಮತ್ತು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನಿಗೆ ನಡೆದುಕೊಳ್ಳುತ್ತಾರೆ. ರೆಡ್ಡಿ ಪ್ರತಿವರ್ಷ ಹನುಮ ಮಾಲೆ ಧರಿಸಿ ಹನುಮವ್ರತ ಕೈಗೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಹನುಮಮಾಲೆ ವಿಸರ್ಜನೆ ದಿನವಾಗಿರುವುದರಿಂದ ಅವರು ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರೆಡ್ಡಿ ಅವರೊಂದಿಗೆ ಹಲವಾರು ಹನುಮ ಭಕ್ತರು ಮತ್ತು ಹನುಮಮಾಲೆ ಧರಿಸಿರುವವರು ಬೆಟ್ಟದಲ್ಲಿ ಪೂಜೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಈ ವರ್ಷವೂ ಗಂಗಾವತಿಯ ಪಂಪಾ ಸರೋವರ ಬಳಿ ಹನುಮ ಮಾಲೆ ಧರಿಸಿದ ಕೆಆರ್​ಪಿಪಿ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ