ವಿದ್ಯುತ್ ಲೈನ್ ಹಾಕದ ಅರಣ್ಯ ಇಲಾಖೆ, ಅಮಾಯಕನ ಪ್ರಾಣ ಹೋಗಿರುವುದಕ್ಕೆ ಹೊಣೆ ಯಾರು? ಕೆ.ಜಿ.ಬೋಪಯ್ಯ ಆಕ್ರೋಶ

| Updated By: ಸಾಧು ಶ್ರೀನಾಥ್​

Updated on: Dec 28, 2020 | 12:45 PM

ಮಡಿಕೇರಿ: ವಿದ್ಯುತ್ ಲೈನ್  ಎಳೆಯಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿರಾಜಪೇಟೆ BJP ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಆನೆ ದಾಳಿಗೆ ವ್ಯಕ್ತಿ ಬಲಿಯಾಗಿದ್ದ. ಹೀಗಾಗಿ ಶವಾಗಾರಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೋಪಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯುತ್ ಲೈನ್ ಎಳೆಯಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ವಿದ್ಯುತ್ ಇದ್ದಿದ್ದರೆ ಆ ವ್ಯಕ್ತಿಯ ಜೀವ ಉಳಿಯುತ್ತಿತ್ತು. ವಿದ್ಯುತ್ ಇಲ್ಲದ […]

ವಿದ್ಯುತ್ ಲೈನ್ ಹಾಕದ ಅರಣ್ಯ ಇಲಾಖೆ, ಅಮಾಯಕನ ಪ್ರಾಣ ಹೋಗಿರುವುದಕ್ಕೆ ಹೊಣೆ ಯಾರು? ಕೆ.ಜಿ.ಬೋಪಯ್ಯ ಆಕ್ರೋಶ
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ತರಾಟೆ
Follow us on

ಮಡಿಕೇರಿ: ವಿದ್ಯುತ್ ಲೈನ್  ಎಳೆಯಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿರಾಜಪೇಟೆ BJP ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ಹೊರ ಹಾಕಿದ್ದಾರೆ.

ಆನೆ ದಾಳಿಗೆ ವ್ಯಕ್ತಿ ಬಲಿಯಾಗಿದ್ದ. ಹೀಗಾಗಿ ಶವಾಗಾರಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೋಪಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯುತ್ ಲೈನ್ ಎಳೆಯಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ವಿದ್ಯುತ್ ಇದ್ದಿದ್ದರೆ ಆ ವ್ಯಕ್ತಿಯ ಜೀವ ಉಳಿಯುತ್ತಿತ್ತು. ವಿದ್ಯುತ್ ಇಲ್ಲದ ಹಿನ್ನೆಲೆ ಆನೆಗಳ ಹಾವಳಿ ಹೆಚ್ಚಾಗಿದೆ. ಅಮಾಯಕನ ಪ್ರಾಣ ಹೋಗಿರುವುದಕ್ಕೆ ಯಾರು ಹೊಣೆ? ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಬೋಪಯ್ಯ ಕಿಡಿ ಕಾರಿದ್ದಾರೆ.

ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ತಡರಾತ್ರಿ ಆನೆ ದಾಳಿಗೆ ಪೇರೂರು ಮಾಂಜಾಟ್ ನಿವಾಸಿ ಪಿ.ಎಂ.ಅಪ್ಪಣ್ಣ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಡೆಗೆ ಶಾಸಕ ಕೆಂಡಾಮಂಡಲರಾಗಿದ್ದಾರೆ.

ಪೇರೂರು ಗ್ರಾಮ: ಮದುವೆ ಕಾರ್ಯಕ್ರಮದಿಂದ ವಾಪಸಾಗುತ್ತಿದ್ದಾಗ ತಡರಾತ್ರಿ ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ