ದೇಶದ ಬೆನ್ನೆಲುಬು ರೈತ.. ರೈತನ ಬೆನ್ನೆಲುಬು ಎತ್ತು: ದಾಖಲೆ ಮೊತ್ತಕ್ಕೆ ಕಿಲಾರಿ ಎತ್ತು ಮಾರಾಟ..
ಜಿಲ್ಲೆಯ ಗಡಿ ಭಾಗದಲ್ಲಿ ಸಿಗುವ ಕಿಲಾರಿ ಹೋರಿಗಳಿಗೆ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ ಇದೆ. ಈ ಕಾರಣಕ್ಕೆ ಎಷ್ಟು ಹಣವಾದ್ರೂ ಪರವಾಗಿಲ್ಲ ಅಂತಾ ಇಲ್ಲಿನ ಎತ್ತುಗಳನ್ನು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ ಮಹಾರಾಷ್ಟ್ರದ ರೈತರು.

ಬೆಳಗಾವಿ: ದೇಶದ ಬೆನ್ನೆಲುಬು ರೈತ. ಈ ರೈತನ ಬೆನ್ನೆಲುಬು ಎತ್ತುಗಳು. ರೈತರ ಪಾಲಿನ ದೇವರು, ರೈತರ ಏಳಿಗೆಗೆ ಹಗಲಿರುಳು ಶ್ರಮಿಸುವ ಎತ್ತುಗಳಿಗೆ ಇಂದಿಗೂ ಕೂಡ ಎಲ್ಲಿಲ್ಲದ ಬೆಲೆ. ಕಡಿಮೆ ಜಮೀನಿನಲ್ಲಿ ಉಳುಮೆ ಮಾಡಿ ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ರೈತರ ಪಾಲಿನ ಆಶಾಕಿರಣ ಈ ಎತ್ತುಗಳಾಗಿವೆ. ಬರೀ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಎತ್ತುಗಳನ್ನು ಬಳಸಿಕೊಳ್ಳದ ರೈತ ಮನೆಯ ಓರ್ವ ಸದಸ್ಯರಂತೆ ಸಾಕಿ ಸಲಹುತ್ತಾನೆ.
ಹಬ್ಬ ಹರಿದಿನ ಬಂದರೆ ಎತ್ತುಗಳಿಗೆ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಮಾಡುವ ಮೂಲಕ ಒಳ್ಳೆಯ ಫಸಲು ಕೊಡು ಅಂತಾ ಕೇಳಿಕೊಳ್ಳುತ್ತಾರೆ. ಎತ್ತುಗಳನ್ನು ಪ್ರಾಚೀನ ಕಾಲದಿಂದಲೂ ಹೇಗೆ ದೈವಿ ಸ್ವರೂಪದಲ್ಲಿ ನೋಡಿಕೊಂಡು ಬರಲಾಗುತ್ತಿದೆಯೋ ಅದೇ ಮಾದರಿಯಲ್ಲಿ ಇಂದಿಗೂ ಗೋವುಗಳನ್ನು ದೈವದ ರೂಪದಲ್ಲಿ ರೈತರು ಕಾಣುತ್ತಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ರೈತರ ನಡುವೆ ಅವಿನಾಭಾವ ಸಂಬಂಧ ಹುಟ್ಟು ಹಾಕಿವೆ ಎತ್ತುಗಳು ಬೆಳಗಾವಿ ಅಂದ್ರೇ ಸಾಕು ಅಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವಿನ ಗಲಾಟೆಗಳೇ ನಮ್ಮ ಕಣ್ಣ ಮುಂದೆ ಬರುತ್ತದೆ. ನಾಡದ್ರೋಹಿ ಎಂಇಎಸ್ನ ಕಿತಾಪತಿ ಹಾಗೂ ದುಷ್ಟ ಬುದ್ದಿಗೆ ಇಂದಿಗೂ ಮರಾಠಿಗರು ಭಾಷೆ ಹೆಸರಿನಲ್ಲಿ ಗಲಾಟೆ ಮಾಡಿಕೊಂಡು ಬರುತ್ತಿರುವುದು ಕಾಣಬಹುದು. ಆದರೂ ಇತ್ತಿಚೀನ ದಿನಗಳಲ್ಲಿ ಅದು ಕಡಿಮೆಯಾಗಿದೆ.
ಹೌದು, ಭಾಷಾ ವೈಷಮ್ಯ ಮೀರಿಯೂ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿ ರೈತರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಜಾನುವಾರುಗಳನ್ನು ಕೊಳ್ಳುವುದು ಮತ್ತು ಮಾರುವ ಮೂಲಕ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.
ಜಾನುವಾರುಗಳಿಂದಾಗಿ ಇಂದಿಗೂ ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ, ಗೋಕಾಕ್ ಭಾಗದಲ್ಲಿ ಎರಡು ರಾಜ್ಯದ ರೈತರು ಅನ್ಯೋನ್ಯವಾಗಿರುವಂತಾಗಿದೆ. ರಾಜ್ಯದ ಎತ್ತುಗಳಿಗೆ ಮಹಾರಾಷ್ಟ್ರದಲ್ಲಿ ಬಲು ಡಿಮ್ಯಾಂಡ್ ಇರುವ ಕಾರಣಕ್ಕೆ ಭಾಷಾ ವೈಷಮ್ಯ ಬಿಟ್ಟು ಕರ್ನಾಟಕಕ್ಕೆ ಬಂದು ಜಾನುವಾರುಗಳನ್ನು ಕೊಳ್ಳುತ್ತಿದ್ದಾರೆ ಮಹಾರಾಷ್ಟ್ರದ ರೈತರು.
ಕಿಲಾರಿ ಹೋರಿಗಳಿಗೆ ಬಲು ಡಿಮ್ಯಾಂಡ್ ಜಿಲ್ಲೆಯ ಗಡಿ ಭಾಗದಲ್ಲಿ ಸಿಗುವ ಕಿಲಾರಿ ಹೋರಿಗಳಿಗೆ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ ಇದೆ. ಈ ಕಾರಣಕ್ಕೆ ಎಷ್ಟು ಹಣವಾದ್ರೂ ಪರವಾಗಿಲ್ಲ ಅಂತಾ ಇಲ್ಲಿನ ಎತ್ತುಗಳನ್ನು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ ಮಹಾರಾಷ್ಟ್ರದ ರೈತರು.
ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ ಸಮೀಪದ ಕುರುಬಗೋಡಿಯ ರೈತ ಅಜ್ಜಪ್ಪ ಪದ್ಮಣ್ಣ ಕುರಿಯವರು 16 ತಿಂಗಳ ಕಿಲಾರಿ ಹೋರಿಯನ್ನು 5.15 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಇದೇ ಹೋರಿಗೆ ಎಂಟು ತಿಂಗಳ ಹಿಂದೆ ಅಜ್ಜಪ್ಪ ಕೇವಲ ಒಂದು ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಹೀಗೆ ಖರೀದಿ ಮಾಡಿದ ಕೆಲವೇ ತಿಂಗಳುಗಳಲ್ಲಿ ಮತ್ತೆ ಇದೇ ಹೋರಿ 5.15 ಲಕ್ಷಕ್ಕೆ ಮಾರಾಟವಾಗಿದ್ದು ರೈತ ಅಜ್ಜಪ್ಪನಿಗೆ ಸಂತಸ ತಂದಿದೆ.
ದಾಖಲೆ ಬೆಲೆಗೆ ಹೋರಿ ಮಾರಾಟ, ಮನೆಯಲ್ಲಿ ಸಂಭ್ರಮ ರೈತ ಅಜ್ಜಪ್ಪ ತಮ್ಮ ಹೋರಿ ದಾಖಲೆ ಬೆಲೆಗೆ ಮಾರಾಟವಾಗಿರುವುದರಿಂದ ಮನೆಯ ಮುಂದೆ ಮಂಟಪ ಹಾಕಿಸಿ ಅದ್ದೂರಿಯಾಗಿ ಸಂಭ್ರಮಾಚರಿಸಿದ್ದಾರೆ. ಇನ್ನೂ ಗ್ರಾಮದ ಮುತ್ತೈದೆಯವರಿಂದ ಆರತಿ ಬೆಳಗಿ, ಪೂಜೆ ಮಾಡಿ ಗ್ರಾಮಸ್ಥರು ಸೇರಿಕೊಂಡು ವಾದ್ಯಗಳಿಂದ ಊರು ತುಂಬೆಲ್ಲಾ ಮೆರವಣಿಗೆ ಮಾಡಲಾಗಿದೆ.
ಇದೇ ಹೋರಿಗೆ ಬಣ್ಣ ಬಡಿದು ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲಾಯಿತು. ಹೆಚ್ಚಿನ ಬೆಲೆಗೆ ಮಾರಾಟವಾದ ಹೋರಿಯನ್ನು ನೋಡಲು ಸುತ್ತಮುತ್ತಲಿನ ರೈತರು ಕೂಡಾ ಆಗಮಿಸಿದ್ದರು.
ಕಿಲಾರಿ ಹೋರಿ ಸಾಕುವುದೇ ನಮ್ಮ ಕಾಯಕವಾಗಿದ್ದು ಹಣಕ್ಕಾಗಿ ಈ ಕೆಲಸ ಮಾಡುವುದಿಲ್ಲ. ಕಿಲಾರಿ ತಳಿ ಕೂಡ ಉಳಿದು ಬೆಳಯಬೇಕೆಂಬ ನಿಟ್ಟಿನಲ್ಲಿ ಐದಾರು ತಿಂಗಳಿರುವ ಹೋರಿಯನ್ನು ತಂದು ಸಾಕಿ ನಂತರ ಮತ್ತೆ ಮಾರಾಟ ಮಾಡುತ್ತೇವೆ ಅಂತಾರೆ ರೈತ ಅಜ್ಜಪ್ಪ.
ಹೋರಿಗೆ ಬಣ್ಣ ಬಡಿದು ಅದ್ದೂರಿ ಮೆರವಣಿಗೆ
ಎತ್ತಿಗೆ ನಡೆಯಿತು ಮನುಷ್ಯರಂತೆ ಶಾಸ್ತ್ರೋಕ್ತ ಅಂತ್ಯಕ್ರಿಯೆ, ಯಾವೂರಲ್ಲಿ?