AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಿ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಪರಮೇಶ್ವರ್

ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಿ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 10, 2025 | 12:14 PM

ತುಮಕೂರು ಜಿಲ್ಲೆಯ ಹಲವು ಭಾಗಗಳಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ಕೆಲಸ ನಡೆಯುತ್ತಿದೆ, ಕೊರಟಗೆರೆ ಕ್ಷೇತ್ರದಲ್ಲಿ 69 ಕೆರೆಗಳಿಗೆ ನೀರು ತುಂಬಿಸಲು ಅನುಮೋದನೆ ಸಿಕ್ಕಿದೆ, ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ ಎಂದು ಪರಮೇಶ್ವರ್ ಶ್ರೀಗಳಿಗೆ ಹೇಳಿದರು. ಜೋನಲ್ ಬ್ಯಾಲೆನ್ಸಿಂಗ್ ರಿಜರ್ವಾಯರ್ ಮೂಲಕ ಪಾವಗಢ ತಾಲ್ಲೂಕಿನ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶ್ರೀಗಳ ಗಮನಕ್ಕೆ ತಂದರು.

ತುಮಕೂರು, ಏಪ್ರಿಲ್ 10: ಗೃಹ ಸಚಿವ ಜಿ ಪರಮೇಶ್ವರ್ ಇಂದು ಜಿಲ್ಲೆಯ ಸಿದ್ಧಗಂಗಾ ಮಠಕ್ಕೆ (Siddaganga mutt) ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಗಳಿಗೆ ನಮಸ್ಕರಿದ್ದಲ್ಲದೆ ಸುಮಾರು ಹೊತ್ತು ಶ್ರೀಗಳ ಜೊತೆ ಕೂತು ಹಲವಾರು ವಿಷಯಗಳು ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಗ್ಯ ಮತ್ತು ನೀರಾವರಿ ಯೋಜನೆಗಳ ಬಗ್ಗೆ ಮಾತಾಡಿದರು. ಸ್ವಾಮೀಜಿಯವರು ಸಿದ್ದರಾಮಯ್ಯನವರ ಮಂಡಿನೋವಿನ ಬಗ್ಗೆ ಕೇಳಿದಾಗ, ಸಾಕಷ್ಟು ಸುಧಾರಿಸಿಕೊಂಡಿದ್ದಾರೆ, ಕೊಂಚ ನೋವಿದೆ, ಸಂಪೂರ್ಣವಾಗಿ ಗುಣಮುಖರಾಗಲು ಮೂರ್ನಾಲ್ಕು ತಿಂಗಳು ಬೇಕು ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:  ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ: ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ