ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ಬಳಿ ಮಿನಿಬಸ್-ಲಾರಿ ನಡುವೆ ಅಪಘಾತ, 7-8 ಜನರಿಗೆ ಗಾಯ
ಮಿನಿಬಸ್ ಜಖಂಗೊಂಡಿರುವ ರೀತಿ ನೋಡಿದರೆ ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿರಬಹುದು ಅಂತ ಅನಿಸುತ್ತದೆ. ಅಪಘಾತದಿಂದಾಗಿ ಸ್ಥಳದಲ್ಲಿ ಕೆಲ ಹೊತ್ತಿನವರೆಗೆ ವಾಹನಗಳ ಸಂಚಾರ ಪ್ರಭಾವಕ್ಕೊಳಗಾಗಿತ್ತು. ಸ್ಥಳೀಯರು ಜೆಸಿಬಿ ಒಂದನ್ನು ತರಿಸಿ ಲಾರಿಗೆ ಸಿಕ್ಹಾಕಿಕೊಂಡಿದ್ದ ಮಿನಿಬಸ್ಸನ್ನು ಬೇರ್ಪಡಿಸಿದರು. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ, ಏಪ್ರಿಲ್ 10: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಪಾಳ್ಯ ಗೇಟ್ (Kannamangala Gate) ಬಳಿ ಇಂದು ಬೆಳ್ಳಂಬೆಳಗ್ಗೆಯೇ ಅಪಘಾತ ಜರುಗಿದೆ. ಅದೃಷ್ಟವಶಾತ್ ಈ ರಸ್ತೆ ಅಪಘಾತಕ್ಕೆ ಯಾರೂ ಬಲಿಯಾಗಿಲ್ಲವಾದರೂ ಮಿನಿಬಸ್ ಚಾಲಕ ಬಹಳ ಗಂಭೀರವಾಗಿ ಗಾಯಗೊಂಡಿದ್ದಾನೆ ಮತ್ತು ಲಭ್ಯವಾಗಿರುವ ಮಾಹಿತಿ ಪ್ರಕಾರ ಅವನ ಬಲಗಾಲು ಫ್ರ್ಯಾಕ್ಚರ್ ಆಗಿದೆ. ತನ್ನ ಮುಂದೆ ಚಲಿಸುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ, ಮಿನಿಬಸ್ ಡ್ರೈವರ್ ಅದಕ್ಕೆ ಗುದ್ದಿದ್ದಾನೆ. ಬಸ್ಸಲ್ಲಿದ್ದ ಇತರ ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ರಾಜ್ಯದ ವಿವಿಧೆಡೆ ರಸ್ತೆ ಅಪಘಾತ: 5 ಮಂದಿ ಬೈಕ್ ಸವಾರರ ಸಾವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
