ಕುಡಿದ ಮತ್ತಲ್ಲಿ ಸಿಕ್ಕಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಬೆಂಗಳೂರಿನ ಇಂದಿರಾನಗರದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯ ಚಲನವಲನಗಳು ಸೆರೆಯಾಗಿದೆ. ಆತ ಅನೇಕ ಮನೆಗಳ ಕಿಟಕಿಯಲ್ಲಿ ಇಣುಕಿ ನೋಡಿದ್ದು, ಒಂದು ಮನೆಯಿಂದ ಮೊಬೈಲ್ ಮತ್ತು ವಾಚ್ ಕಳ್ಳತನ ಮಾಡಿದ್ದಾನೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಏಪ್ರಿಲ್ 10: ಕುಡಿದ ಅಮಲಿನಲ್ಲಿ ಓರ್ವ ವ್ಯಕ್ತಿ ಸಿಕ್ಕಸಿಕ್ಕ ಮನೆಗಳಿಗೆ ನುಗ್ಗಿ, ಕಿತಾಪತಿ ಮಾಡಿರುವಂತಹ ಘಟನೆ ಇಂದಿರಾನಗರ (Indiranagar) ಭಾಗದಲ್ಲಿ ನಡೆದಿದೆ. ದೊಡ್ಡ ದೊಡ್ಡ ಬಿಲ್ಡಿಂಗ್ಗಳನ್ನು ಸಲೀಸಾಗಿ ಹತ್ತುವ ಆಸಾಮಿ, ಮನೆಯ ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಅಷ್ಟೇ ಅಲ್ಲದೆ ಮನೆಯೊಂದರಲ್ಲಿ ಮೊಬೈಲ್, ವಾಚ್ ಕಳ್ಳತನ ಕೂಡ ಮಾಡಿದ್ದಾನೆ. ಕುಡುಕನ ಚಲನವಲನ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Apr 10, 2025 01:28 PM