ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸಹ ಭಾಗಿಯಾಗಿದ್ದರು. ಅವರು ಸಚಿವರಾದ ಬಳಿಕೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಹೇಳಲಾಗುತ್ತಿದೆ. ವೇದಿಕೆ ಮೇಲೆ ಪೋಡಿಯಂ ಹತ್ತಿ ಮಾತಾಡುತ್ತಿದ್ದ ಅಧಿಕಾರಿಯೊಬ್ಬರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭೂಮಾಪನಾ ಇಲಾಖೆಯಲ್ಲಿ ಆಗಿರುವ ಬದಲಾವಣೆಗಳ ಕ್ರೆಡಿಟ್ ಸಿಎಂ ಅವರಿಗೆ ನೀಡಿದರು.
ಬೆಂಗಳೂರು, ಏಪ್ರಿಲ್ 10: ವಿಧಾನ ಸೌಧದಲ್ಲಿ ಇಂದು ನಡೆದ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮದಲ್ಲಿ (National Survey Day programme) ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡರು. ಮುಖ್ಯಮಂತ್ರಿಯವರನ್ನು ಇಲಾಖೆಯ ಅಧಿಕಾರಿಗಳು ಶಾಲು ಹೊದಿಸಿ, ಹೂಮಾಲೆಗಳನ್ನು ಕೊರಳಿಗೆ ಹಾಕಿ, ಕೈಗೆ ಬೋಕೆ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿದರು. ಹಾರ ತುರಾಯಿಗಳಿಂದ ತನ್ನನ್ನು ಸನ್ಮಾನಿಸುವುದು ಬೇಡ ಎಂದಿದ್ದ ಸಿದ್ದರಾಮಯ್ಯನವರಿಗೆ ದೊಡ್ಡ ಗಾತ್ರದ ಹಾರಗಳನ್ನು ಹಾಕಲಾಯಿತು. ಎಲ್ಲವನ್ನೂ ಮುಖ್ಯಮಂತ್ರಿಯವರು ನಗುಮೊಗದಿಂದ ಸ್ವಾಗತಿಸಿದರು.
ಇದನ್ನೂ ಓದಿ: ನೀರಿನ ದರಯೇರಿಕೆ; ಆಡಳಿತ ನಡೆಸಲಾಗಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ನಿವಾಸಿಗಳು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos