ಊಸರವಳ್ಳಿ… ಲೈವ್ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
IPL 2025 PBKS vs CSK: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಗ್ಗರಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 219 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 201 ರನ್ಗಳಿಸಲಷ್ಟೇ ಶಕ್ತರಾದರು.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಮೆಂಟೇಟರ್ಗಳಾದ ನವಜೋತ್ ಸಿಂಗ್ ಸಿಧು ಹಾಗೂ ಅಂಬಾಟಿ ರಾಯುಡು (Ambati Rayudu) ಮಾತಿನ ಚಕಮಕಿ ನಡೆಸುತ್ತಿರುವುದು ಕಾಣಬಹುದು. ಅಷ್ಟಕ್ಕೂ ಇಬ್ಬರ ನಡುವಣ ವಾಕ್ಸಮರಕ್ಕೆ ಕಾರಣವೇನು? ಎಂದು ನೋಡುವುದಾದರೆ…
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ನವಜೋತ್ ಸಿಂಗ್ ಸಿಧು ಹಾಗೂ ಅಂಬಾಟಿ ರಾಯುಡು ಕಾಮೆಂಟೇಟರ್ಗಳಾಗಿ ಕಾಣಿಸಿಕೊಂಡಿದ್ದರು. ಸಿಎಸ್ಕೆ ತಂಡವು ಶಿವಂ ದುಬೆ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ಗೆ ಆಗಮಿಸಿದ್ದರು.
ಧೋನಿ ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಿಧು, ಇವತ್ತು ಮಾಹಿ ಓಡುತ್ತಿದ್ದಾರೆ. ಇದರ ಉದ್ಧೇಶ ಕೂಡ ಸ್ಪಷ್ಟವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಯುಡು “ಹೌದು, ಧೋನಿ ಇಂದು ಬ್ಯಾಟ್ ಅಲ್ಲ, ಕತ್ತಿ ಹಿಡಿದುಕೊಂಡು ಬರುತ್ತಿರುದ್ದಾರೆ ಎಂದಿದ್ದಾರೆ.
ಈ ಪ್ರತಿಕ್ರಿಯೆಗೆ ಕೋಪಗೊಂಡ ಸಿಧು, “ಹೇ ಮನುಷ್ಯ, ಅವನು ಬ್ಯಾಟಿಂಗ್ ಮಾಡಲು ಬರುತ್ತಿದ್ದಾನೆ, ಯುದ್ಧ ಮಾಡಲು ಅಲ್ಲ” ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.
ಇದರಿಂದ ವಿಚಲಿತರಾದ ಅಂಬಾಟಿ ರಾಯುಡು, ನೀವು ಊಸರವಳ್ಳಿವಂತೆ ಪ್ರತಿ ಬಾರಿ ತಂಡವನ್ನು ಬದಲಾಯಿಸುತ್ತೀರಿ ಎಂದು ಕಾಲೆಳೆದಿದ್ದಾರೆ.
ಅಂಬಾಟಿ ರಾಯುಡು ಅವರ ಈ ಪ್ರತಿಕ್ರಿಯೆಯಿಂದ ಕೋಪಗೊಂಡ ನವಜೋತ್ ಸಿಂಗ್ ಸಿಧು, ಊಸರವಳ್ಳಿ ಯಾರಿಗಾದರೂ ಆರಾಧ್ಯದೈವವಾಗಿದ್ದರೆ, ಅದು ನಿಮ್ಮದು (CSK) ಎನ್ನುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.