ಅಪಘಾತದಲ್ಲಿ ಅಗಲಿದ ಕಟ್ಟಾ ಅಭಿಮಾನಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಹೊನ್ನಾಳಿ ಶಾಸಕ ರೇಣುಕಾಚಾರ್ಯ

ನೆಚ್ಚಿನ ಅಭಿಮಾನಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಂಬನಿ ಮಿಡಿದ ಘಟನೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ತಮ್ಮ ಮೃತ ಅಭಿಮಾನಿಯ ನಿವಾಸಕ್ಕೆ ಭೇಟಿಕೊಟ್ಟ ಶಾಸಕ ಆತನ ಕುಟುಂಬಸ್ಥರಿಗೆ ನೆರವಿನ ಹಸ್ತ ಚಾಚಿದರು.

ಅಪಘಾತದಲ್ಲಿ ಅಗಲಿದ ಕಟ್ಟಾ ಅಭಿಮಾನಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಹೊನ್ನಾಳಿ ಶಾಸಕ ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ

Updated on: Mar 19, 2021 | 9:25 PM

ದಾವಣಗೆರೆ: ನೆಚ್ಚಿನ ಅಭಿಮಾನಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಂಬನಿ ಮಿಡಿದ ಘಟನೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ತಮ್ಮ ಮೃತ ಅಭಿಮಾನಿಯ ನಿವಾಸಕ್ಕೆ ಭೇಟಿಕೊಟ್ಟ ಶಾಸಕ ಆತನ ಕುಟುಂಬಸ್ಥರಿಗೆ ನೆರವಿನ ಹಸ್ತ ಚಾಚಿದರು.

ಎಂ.ಪಿ.ರೇಣುಕಾಚಾರ್ಯ ಕಣ್ಣೀರು

ಮೃತ ಯುವಕನ ಕುಟುಂಬಸ್ಥರನ್ನು ಭೇಟಿಯಾದ ಶಾಸಕ

ಅಂದ ಹಾಗೆ, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಅಭಿಮಾನಿಯಾದ ಗ್ರಾಮದ 21 ವರ್ಷದ ಯುವಕ ಶಿವು ಮೊನ್ನೆ ಶಿವಮೊಗ್ಗದಿಂದ ಬೈಕ್​ನಲ್ಲಿ ಮನೆಗೆ ಬರುವಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಅಭಿಮಾನಿಯ ಸಾವಿ‌ನ ಸುದ್ದಿ ತಿಳಿದ ಶಾಸಕ ಇಂದು‌ ಆತನ ಮನೆಗೆ ಭೇಟಿ ಕೊಟ್ಟು ಯುವಕನ ಪೋಷಕರಿಗೆ ಸಾಂತ್ವನ ಹೇಳಿದರು. ಜೊತೆಗೆ, ಶಿವುನನ್ನು ನೆನೆದು ಕಣ್ಣೀರು ಸಹ ಹಾಕಿದರು. ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ಬಳಿಕ ಅವರಿಗೆ ಆರ್ಥಿಕ ಸಹಾಯ ಸಹ ಮಾಡಿದರು.

ಶಿವು ಕುಟುಂಬದವರಿಗೆ ಸಾಂತ್ವನ ಹೇಳಿದ ಶಾಸಕ

ಕುಟುಂಬಸ್ಥರಿಗೆ ಧನ ಸಹಾಯ ಮಾಡಿದ ರೇಣುಕಾಚಾರ್ಯ

ಇದನ್ನೂ ಓದಿ: ಸಿಡಿಯಲ್ಲಿರುವ ಯುವತಿ ನಿಮಗೆ ಪರಿಚಯವೇ? -ರಮೇಶ್ ಜಾರಕಿಹೊಳಿಗೆ SIT ಅಧಿಕಾರಿಗಳ ನೇರ ಪ್ರಶ್ನೆ

Published On - 9:24 pm, Fri, 19 March 21