ಸಿಡಿಯಲ್ಲಿರುವ ಯುವತಿ ನಿಮಗೆ ಪರಿಚಯವೇ? -ರಮೇಶ್ ಜಾರಕಿಹೊಳಿಗೆ SIT ಅಧಿಕಾರಿಗಳ ನೇರ ಪ್ರಶ್ನೆ
ಎಸ್‌ಐಟಿ ಅಧಿಕಾರಿಗಳಿಂದ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಾಗುತ್ತಿದೆ. ಆಡುಗೋಡಿ ಟೆಕ್ನಿಕಲ್ ವಿಂಗ್‌ನ ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಮೂರು ಗಂಟೆಗಳಿಂದ ಎಸ್‌ಐಟಿ ತಂಡ ವಿಚಾರಣೆ ನಡೆಸುತ್ತಿದೆ.
ಬೆಂಗಳೂರು: ಎಸ್‌ಐಟಿ ಅಧಿಕಾರಿಗಳಿಂದ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಾಗಿದೆ. ಆಡುಗೋಡಿ ಟೆಕ್ನಿಕಲ್ ವಿಂಗ್‌ನ ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗಿದೆ. ಸತತ 4 ಗಂಟೆಗಳ ಕಾಲ ಎಸ್‌ಐಟಿ ತಂಡ ವಿಚಾರಣೆ ನಡೆಸಿದೆ. ಎರಡನೇ ಸಲ ವಿಚಾರಣೆ ನಡೆಸ್ತಿರುವ ಎಸ್‌ಐಟಿ ಅಧಿಕಾರಿಗಳು ತಂಡ ಮುಖ್ಯಸ್ಥ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಚಾರಣೆ ಮಾಡಿದ್ದಾರೆ. ಈ ವೇಳೆ, ಅಧಿಕಾರಿಗಳಾದ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್, DCP ಅನುಚೇತ್ ಸೇರಿ ಇತರೆ ಅಧಿಕಾರಿಗಳು ಸಹ ಹಾಜರಾಗಿದ್ದರು.
ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿಗೆ ತಂಡ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದೆ ಎಂದು ತಿಳಿದುಬಂದಿದೆ. ಆ ಸಿಡಿ ನಕಲಿ ಅಂತಾ ನೀವು ಹೇಗೆ ಹೇಳ್ತೀರಾ? ಸಿಡಿಯಲ್ಲಿರುವ ಯುವತಿ ನಿಮಗೆ ಪರಿಚಯನಾ? ಸಿಡಿ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿಲಾಗಿತ್ತಾ? ಸಿಡಿ ಸಂಚುಕೋರರ ಬಗ್ಗೆ ನಿಮಗೆ ಎಷ್ಟು ಗೊತ್ತು? ಎಂದು ರಮೇಶ್ ದೂರು ಆಧರಿಸಿ ಎಸ್‌ಐಟಿ ವಿಚಾರಣೆ ನಡೆಸಿದೆ ಎಂಬ ಮಾಹಿತಿ ದೊರೆತಿದೆ.
ಸಿಡಿ ನಕಲಿ, ಬ್ಲ್ಯಾಕ್‌ಮೇಲ್ ಯತ್ನ ಎಂದಿದ್ದರು. ರಾಜಕೀಯ ತೇಜೋವಧೆಗೆ ಷಡ್ಯಂತ್ರ ಆರೋಪ ಎಂದು ಹೇಳಿದ್ದೀರಾ. ಷಡ್ಯಂತ್ರ ಅಂತಾ ನೀವು ಹೇಗೆ ಆರೋಪಿಸ್ತೀರಾ? ಎಂದು ರಮೇಶ್ ಜಾರಕಿಹೊಳಿಗೆ SIT ಟೀಮ್ ಪ್ರಶ್ನೆ ಮಾಡಿದೆ.
ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ನು, ವಿಚಾರಣೆ ಸಂಬಂಧ ಎಸ್‌ಐಟಿ ತಂಡ ಎಲ್ಲಾ ರೀತಿಯ ತಯಾರಿ ನಡೆಸಿತ್ತು. ಎಸ್‌ಐಟಿ ತಂಡ ಕೇಳುತ್ತಿರುವ ಪ್ರಶ್ನೆಗಳಿಗೆ ರಮೇಶ್ ಉತ್ತರ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ, ತಮ್ಮ ಸಹೋದರನ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗೃಹಸಚಿವ ಬಸವರಾಜ ಬೊಮ್ಮಾಯಿರನ್ನು ಭೇಟಿಯಾದರು. ಆರ್.ಟಿ.ನಗರದಲ್ಲಿರುವ ಬೊಮ್ಮಾಯಿ ಖಾಸಗಿ ನಿವಾಸಕ್ಕೆ ಬಾಲಚಂದ್ರ ಜಾರಕಿಹೊಳಿ ಭೇಟಿ ನೀಡಿದರು.
ಇದನ್ನೂ ಓದಿ: ‘ಯತ್ನಾಳ್ ಹೇಳಿಕೆಗಳನ್ನು ನಾವು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ; ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ’
Published On - 8:03 pm, Fri, 19 March 21