ಬೆಂಗಳೂರು: ಸಚಿವ ಸಂಪುಟ ರಚನೆ..ವಿಸ್ತರಣೆ ಏನೇ ಇರಲಿ ಅದು ಮುಗಿದ ಬಳಿಕೆ ಒಂದಷ್ಟು ಜನರಿಗೆ ನಿರಾಸೆ ಕಟ್ಟಿಟ್ಟಬುತ್ತಿ. ಅದರಲ್ಲಿ ಒಂದೆರಡು ಬಾರಿ ನಿರಾಸೆಗೆ ಒಳಗಾದವರು ಕಾಯುತ್ತಾರೆ..ಪದೇಪದೆ ನಿರಾಸೆಗೆ ಒಳಗಾದವರು ಬಂಡಾಯ ಏಳುತ್ತಾರೆ. ಮತ್ತೊಂದಿಷ್ಟು ಮಂದಿ ಎಷ್ಟೇ ಬೇಸರವಾದರೂ ಬಂಡಾಯ ಏಳದೆ..ತಮ್ಮ ಹಿರಿಯ ನಾಯಕರ ಬಳಿ ದುಃಖ ತೋಡಿಕೊಳ್ಳುತ್ತಾರೆ. ಇದು ರಾಜಕಾರಣದಲ್ಲಿ ಸರ್ಕಾರ ರಚನೆಯಾಗುವಾಗ ಸಾಮಾನ್ಯವಾಗಿ ಕಂಡುಬರುವ ಸನ್ನಿವೇಶ.
ಹಾಗೇ ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಹೊಸದಾಗಿ ಸಂಪುಟ ರಚನೆ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರ ಸಂಪುಟದಲ್ಲಿದ್ದ ಕೆಲವರನ್ನು ಕೈಬಿಟ್ಟಿದ್ದಾರೆ. ಹೊಸದಾಗಿ ಮತ್ತೊಂದಷ್ಟು ಮಂದಿಯನ್ನು ಸೇರಿಸಿಕೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಿಂದ ಕೆಲವರು ಸಮಾಧಾನಗೊಂಡಿದ್ದರೆ, ಹಲವರು ಬೇಸರಗೊಂಡಿದ್ದಾರೆ. ಅದರಲ್ಲಿ ಶಾಸಕ ರೇಣುಕಾಚಾರ್ಯ ಕೂಡ ಒಬ್ಬರು.
ಕಳೆದಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ರೇಣುಕಾಚಾರ್ಯನವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಮನಸಲ್ಲಿ ಸಣ್ಣ ಅಸಮಾಧಾನ ಇದ್ದರೂ, ಅದನ್ನು ತೋರಿಸಿಕೊಂಡಿರಲಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದೇ ಹೇಳುತ್ತಬಂದಿದ್ದರು. ಆಮೇಲೆ ಕೊವಿಡ್ 19 ಸಂದರ್ಭದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಗಮನಸೆಳೆದಿದ್ದರು. ಅದೆಷ್ಟೋ ಮಂದಿ ರೇಣುಕಾಚಾರ್ಯನವರು ಕೊವಿಡ್ 19 ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವುದನ್ನು ನೋಡಿ ಸಿಕ್ಕಾಪಟೆ ಖುಷಿಯನ್ನೂ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಬೊಮ್ಮಾಯಿ ಸಂಪುಟದಲ್ಲೂ ಸ್ಥಾನ ಗಿಟ್ಟಿಸಲು ಸಾಧ್ಯವಾಗದ್ದಕ್ಕೆ ತುಸು ಹೆಚ್ಚಾಗಿಯೇ ಬೇಸರಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಅರುಣ್ಸಿಂಗ್ರನ್ನು ಭೇಟಿ ಮಾಡಿದ ರೇಣುಕಾಚಾರ್ಯ
ಇನ್ನು ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ದೆಹಲಿಗೆ ವಾಪಸ್ ಆಗದೆ, ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿಯೇ ಉಳಿದುಕೊಂಡಿದ್ದಾರೆ. ಸಂಪುಟ ರಚನೆ ಮುಗಿಯುತ್ತಿದ್ದಂತೆ ರೇಣುಕಾಚಾರ್ಯ ಕುಮಾರಕೃಪಾಕ್ಕೆ ತೆರಳಿ ಅರುಣ್ಸಿಂಗ್ರನ್ನು ಭೇಟಿಯಾಗಿದ್ದಾರೆ. ನನಗ್ಯಾಕೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದನ್ನೂ ಪ್ರಶ್ನಿಸಿ, ನೋವು ವ್ಯಕ್ತಪಡಿಸಿದ್ದಾರೆ. ನಂತರ ಅವರನ್ನು ಸಮಾಧಾನ ಮಾಡಿರುವ ಅರುಣ್ ಸಿಂಗ್, ಮುಂದೆ ಒಂದೊಳ್ಳೆ ಗೌರವಯುತ ಹುದ್ದೆ ಕೊಡುವುದಾಗಿ ಭರವಸೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Bengaluru Night Curfew: ಆಗಸ್ಟ್ 16ರವರೆಗೆ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ; ವಿವರ ಇಲ್ಲಿದೆ
ಡಿಜಿಲಾಕರ್ ಬಂದಿದೆ, ವಾಹನದ ಡಾಕ್ಯುಮೆಂಟ್ಗಳನ್ನು ಇನ್ನು ಮುಂದೆ ಜೊತೆಯಲ್ಲಿ ಕ್ಯಾರಿ ಮಾಡುವ ಅವಶ್ಯಕತೆಯಿಲ್ಲ
MLA Renukacharya Met Arun Singh In Kumarkrupa Guesthouse