ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ.. ಕೊಡದೆ ಇದ್ರೂ ಬೇಸರವಿಲ್ಲ: ಶಾಸಕ ರಾಮದಾಸ್​

| Updated By: ಸಾಧು ಶ್ರೀನಾಥ್​

Updated on: Jan 11, 2021 | 11:26 AM

ಮುಂದಿನ ಎರಡೂವರೆ ವರ್ಷ ಬಿ.ಎಸ್​. ಯಡಿಯೂರಪ್ಪನವರೇ ನಮ್ಮ ಕ್ಯಾಪ್ಟನ್​. ಮಂತ್ರಿ ಸ್ಥಾನದ ಬಗ್ಗೆ ನಾವು ಯಾವುದೇ ಆಸೆ, ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ರಾಮದಾಸ್​ ಹೇಳಿದ್ದಾರೆ.

ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ.. ಕೊಡದೆ ಇದ್ರೂ ಬೇಸರವಿಲ್ಲ: ಶಾಸಕ ರಾಮದಾಸ್​
ಅಸಮಾಧಾನದ ಹೊಗೆಯಾಡುತ್ತಲೇ ಸಿಎಂ ಬೊಮ್ಮಾಯಿಗೆ ಮುಚ್ಚಿದ ಲಕೋಟೆ ಕೊಟ್ಟು ಬಂದ ಶಾಸಕ ಎಸ್.ಎ.ರಾಮದಾಸ್
Follow us on

ಮೈಸೂರು: ಸದ್ಯ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್​ ಸಿಗ್ನಲ್ ಸಿಕ್ಕಿದ್ದು, ಜನವರಿ 13ರಂದು 7ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಇದೀಗ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಮತ್ತಷ್ಟು ನಿರೀಕ್ಷೆ ಸಹಜವಾಗಿಯೇ ಹುಟ್ಟಿದೆ.

ಮಂತ್ರಿಯಾಗಬೇಕು ಎಂದು ಬಹುದಿನಗಳಿಂದಲೂ ಆಸೆ ಹೊತ್ತಿರುವ ಶಾಸಕ ಎಸ್​.ಎ.ರಾಮದಾಸ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಎಸ್​ವೈ ತಂಡದಲ್ಲಿ ಯಾರಿರಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ನನಗೆ ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೆ ಇದ್ದರೂ ಬೇಸರವಿಲ್ಲ ಎಂದು ಹೇಳಿದ್ದಾರೆ.

ಸುತ್ತೂರಿನಲ್ಲಿ ಮಾತನಾಡಿದ ರಾಮದಾಸ್​, ಮುಂದಿನ ಎರಡೂವರೆ ವರ್ಷ ಬಿ.ಎಸ್​. ಯಡಿಯೂರಪ್ಪನವರೇ ನಮ್ಮ ಕ್ಯಾಪ್ಟನ್​. ಮಂತ್ರಿ ಸ್ಥಾನದ ಬಗ್ಗೆ ನಾವು ಯಾವುದೇ ಆಸೆ, ನಿರೀಕ್ಷೆ ಇಟ್ಟುಕೊಂಡಿಲ್ಲ. ಒಮ್ಮೆ ಸಿಕ್ಕರೆ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ. ಸಿಗದೆ ಇದ್ದರೂ ನಮ್ಮ ಕೆಲಸ ಇದ್ದೇ ಇರುತ್ತದೆ ಎಂದರು.

ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ಗ್ರೀನ್​​ ಸಿಗ್ನಲ್​ ಸಿಕ್ಕಿದೆ; ಜ.13ರಂದು ನೂತನ ಸಚಿವರ ಪ್ರಮಾಣ ವಚನ -ಸಿಎಂ BSY