ಬಾಗಲಕೋಟೆ: ಪುರಸಭೆ ಸದಸ್ಯೆ ಚಾಂದಿನಿ ನಾಯಕ್ರ ಗರ್ಭಪಾತವೇ ಸುಳ್ಳು ಎಂಬ ಮಾಹಿತಿ ನನಗಿದೆ ಎಂದು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹೇಳಿದ್ದಾರೆ. ಮಹಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಟಿವಿ 9ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ಬಂದ ಮಾಹಿತಿ ಪ್ರಕಾರ ಆರು ವರ್ಷದ ಹಿಂದೆ ಆಕೆಗೆ ಆಪರೇಷನ್ ಆಗಿದೆ. ಈ ಹಿಂದೆಯೇ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ, ನಿಖರವಾಗಿ ಗೊತ್ತಿಲ್ಲ. ಈ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದರು.
‘ಭಾವನಾತ್ಮಕವಾಗಿ, ಸೋದರಭಾವದಿಂದ ಅವರನ್ನು ಮುಟ್ಟಿದೆ’
ನೂಕುನುಗ್ಗಲಿನಲ್ಲಿ ಶೇಕಡಾ 90ರಷ್ಟು ಜನರು ಕಾಂಗ್ರೆಸ್ನವರಿದ್ದರು. ನಾನು ಭಾವನಾತ್ಮಕವಾಗಿ, ಸೋದರಭಾವದಿಂದ ಅವರನ್ನು ಮುಟ್ಟಿದ್ದು ನಿಜ. ಅವರು ನನ್ನ ಮಗಳ ಸಮಾನ. ಆ ಬಗ್ಗೆ ನಾನು ಕ್ಷಮೆ ಕೇಳಿದ್ದೇನೆ ಎಂದು ಸಿದ್ದು ಸವದಿ ಹೇಳಿದರು.
ಕಾಂಗ್ರೆಸ್ನವರಿಗೆ ಬೇರೆ ಕೆಲಸವಿಲ್ಲ. ಇದು ನೀಚ ಕಾರಣ. ಇಂತಹ ರಾಹಕಾರಣ ಸರಿಯಲ್ಲ. ರಾತ್ರೋರಾತ್ರಿ ನಮ್ಮ ಸದಸ್ಯರನ್ನು ಕಿಡ್ನಾಪ್ ಮಾಡಿದರು. ಎಲ್ಲದರ ಬಗ್ಗೆ ತನಿಖೆಯಾಗಲಿ. ಪ್ರಕರಣ ಮುಗಿದು 20 ದಿನದ ನಂತರ ಈಗ ಈ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಈ ಬಗ್ಗೆ ತನಿಖೆಯಾಗಲಿ. ತನಿಖೆಗೆ ನಾನು ಸಿದ್ಧ ಎಂದು ಮಹಲಿಂಗಪುರ ಪಟ್ಟಣದಲ್ಲಿ ಟಿವಿ 9ಗೆ ಸಿದ್ದು ಸವದಿ ಹೇಳಿದ್ದಾರೆ.
ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತ
Published On - 4:43 pm, Mon, 30 November 20