AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಸರಾಸಕ್ತರಿಗೆ ಇಲ್ಲಿದೆ ಸಂತಸದ ಸುದ್ದಿ; ಹೊಸ ಪ್ರಬೇಧದ ಕಪ್ಪೆಗೆ ಬೆಂಗಳೂರಿನ ಹೆಸರು!

ಬೆಂಗಳೂರಿನ ಹೊರವಲಯದಲ್ಲಿ ಹೊಸ ಪ್ರಬೇಧದ ಕಪ್ಪೆಯೊಂದು ಪತ್ತೆಯಾಗಿದೆ. ನಗರದ ಗೌರವಾರ್ಥ ಬಿಲಗಪ್ಪೆಗೆ ‘ಸ್ಪೆರೋಥೆಕಾ ಬೆಂಗಳೂರು’ ಎಂದು ನಾಮಕರಣ ಮಾಡಲಾಗಿದೆ.

ಪರಿಸರಾಸಕ್ತರಿಗೆ ಇಲ್ಲಿದೆ ಸಂತಸದ ಸುದ್ದಿ; ಹೊಸ ಪ್ರಬೇಧದ ಕಪ್ಪೆಗೆ ಬೆಂಗಳೂರಿನ ಹೆಸರು!
ಬಿಲಗಪ್ಪೆ ‘ಸ್ಪೆರೊಥೆಕಾ ಬೆಂಗಳೂರು’
guruganesh bhat
|

Updated on:Nov 30, 2020 | 5:55 PM

Share

ಬೆಂಗಳೂರು: ನಗರದ ಹೊರವಲಯದಲ್ಲಿ ಹೊಸ ಪ್ರಬೇಧದ ಬಿಲಗಪ್ಪೆಯೊಂದು ಪತ್ತೆಯಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ ದೀಪಕ್ ಅವರ ತಂಡ ಉಭಯಚರಿಗಳನ್ನು ಪತ್ತೆಹಚ್ಚುವ ಯೋಜನೆಯಲ್ಲಿ ಈ ಬಿಲಗಪ್ಪೆಯನ್ನು ಪತ್ತೆಹಚ್ಚಿದ್ದಾರೆ.

ಹೊಸ ಕಪ್ಪೆಯ ಹೆಸರೇನು ಗೊತ್ತೇ..? ಕಪ್ಪೆಯ ಈ ಪ್ರಬೇಧ ಬೆಂಗಳೂರಿನ ಹೊರವಲಯದಲ್ಲಿ ಪತ್ತೆಯಾಗಿರುವುದರಿಂದ ಬೆಂಗಳೂರಿನ ಹೆಸರನ್ನೇ ನಾಮಕರಣ ಮಾಡಿದ್ದೇವೆ ಎಂದು ವಿವರಿಸಿದರು ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ದೀಪಕ್.

ವಿಜ್ಞಾನಿಗಳಾದ ಡಾ ಕೆ ಪಿ ದಿನೇಶ್, ಡಾ ಅನ್ನೆಮರಿ ಓಹ್ಲರ್, ಡಾ ಕಾರ್ತಿಕ್ ಶಂಕರ್, ಡಾ ಬಿ ಎಚ್ ಕೇಶವಮೂರ್ತಿ, ಪ್ರೊ ಜೆ ಎಸ್ ಆಶಾದೇವಿ ಅವರ ಜೊತೆಗೂಡಿ ಈ ಬಿಲಗಪ್ಪೆಯನ್ನು ಅವರು ಪತ್ತೆಹಚ್ಚಿದ್ದಾರೆ.

ಸ್ಪೆರೊಥಿಕಾ ಬೆಂಗಳೂರಿನ ಇನ್ನೊಂದು ನೋಟ

ಹೊಸ ಬಿಲಕಪ್ಪೆಯನ್ನು ದಕ್ಷಿಣ ಏಷ್ಯಾದ್ಯಂತ ಕಂಡುಬರುವ ಸ್ಪೆರೋಥಿಕಾ ಪ್ರಬೇಧದ ಕಪ್ಪೆಯ ಜೊತೆ ಹೋಲಿಸಿ ವಿವರಿಸಲಾಗಿದೆ. ಅಂತರಾಷ್ಟ್ರೀಯ ಜರ್ನಲ್ ‘ಝೋಟಾಕ್ಸಾ’ದಲ್ಲಿ ‘ಸ್ಪೆರೋಥೆಕಾ ಬೆಂಗಳೂರು’ ಕುರಿತು ಸಂಶೋಧನಾ ಬರಹ ಪ್ರಕಟಿಸಲಾಗಿದೆ. ವಾಸ, ಸಂತಾನೋತ್ಪತ್ತಿಯ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕಿದೆ ಎಂದು ಪಿ. ದೀಪಕ್ ತಿಳಿಸಿದರು.

ಪರಿಸರಾಸಕ್ತರಿಗೆ ಖುಷಿ.. ವಿಪರೀತ ನಗರೀಕರಣದಿಂದಾಗಿ ಬೆಂಗಳೂರಿನ ಸುತ್ತಮುತ್ತ ಜಲಮೂಲಗಳು ದಿನೇ ದಿನೇ ಮಲಿನವಾಗುತ್ತಿವೆ. ಪರಿಸರದ ಶುದ್ಧತೆಯ ಸೂಚಕವಾದ ಕಪ್ಪೆಗಳ ಪ್ರಬೇಧವು ಪತ್ತೆಯಾಗುವ ಮುನ್ನವೇ ನಶಿಸಿಹೋಗುತ್ತಿವೆ. ಇಂತಹ ಕಾಲಘಟ್ಟದಲ್ಲಿ ಹೊಸ ಬಿಲಗಪ್ಪೆಯ ಪ್ರಬೇಧ ಪತ್ತೆಯಾಗಿರುವುದು ಪರಿಸರಾಸಕ್ತರ ಕುತೂಹಲಕ್ಕೆ ಕಾರಣವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಶೋಧಕ ಪಿ ದೀಪಕ್​ರನ್ನು ಸಂಪರ್ಕಿಸಬಹುದಾಗಿದೆ. deepak.sphaeros@gmail.com

ಇನ್ನಷ್ಟು ಓದಿ: ಹರಿದ್ವರ್ಣ ಕಾಡುಗಳಲ್ಲಿ ಅಪರೂಪದ ಮಲಬಾರ್​​ ಕಪ್ಪೆಗಳ ವಟವಟ!

Published On - 5:40 pm, Mon, 30 November 20

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ