ಚೀಟಿ ಕೊಟ್ಟು ಮತದಾನಕ್ಕೆ ಕಳಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ.. ಮಾಜಿ ಸಚಿವರ ಪುತ್ರನ ಉದ್ಧಟತನ, ಯಾವೂರಲ್ಲಿ?

|

Updated on: Dec 27, 2020 | 2:29 PM

ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ್ ನಾಡಗೌಡ ಇಂದು ನಡೆಯುತ್ತಿದ್ದ ಮತದಾನಕಟ್ಟೆಗೆ ಆಗಮಿಸಿ ಮತದಾನಕ್ಕೆ ಅಡ್ಡಿಪಡಿಸಿದ್ದಾನೆ. ಕಾಂಗ್ರೆಸ್ ಬೆಂಬಲಿಗರಿಗೆ ಚೀಟಿ ಕೊಟ್ಟು ಮತದಾನಕ್ಕೆ ಕಳಿಸುತ್ತಿದ್ದನಂತೆ.

ಚೀಟಿ ಕೊಟ್ಟು ಮತದಾನಕ್ಕೆ ಕಳಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ.. ಮಾಜಿ ಸಚಿವರ ಪುತ್ರನ ಉದ್ಧಟತನ, ಯಾವೂರಲ್ಲಿ?
ಅಭಿಷೇಕ್ ನಾಡಗೌಡ
Follow us on

ರಾಯಚೂರು: ಇಂದು ರಾಜ್ಯದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಮತಗಟ್ಟೆಯಲ್ಲಿ ಶಾಸಕನ ಪುತ್ರ ದರ್ಪ ಮೆರೆದಿದ್ದು ದಾಂದಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ್ ನಾಡಗೌಡ ಇಂದು ನಡೆಯುತ್ತಿದ್ದ ಮತದಾನಕಟ್ಟೆಗೆ ಆಗಮಿಸಿ ಮತದಾನಕ್ಕೆ ಅಡ್ಡಿಪಡಿಸಿದ್ದಾನೆ. ಬೆಂಬಲಿಗರಿಗೆ ಚೀಟಿ ಕೊಟ್ಟು ಮತದಾನಕ್ಕೆ ಕಳಿಸುತ್ತಿದ್ದನಂತೆ. ಇದಕ್ಕೆ ಚುನಾವಣಾಧಿಕಾರಿಗಳು ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಮತಗಟ್ಟೆಯೊಳಗೆ ನುಗ್ಗಿ ಮತಗಟ್ಟೆ ಬಾಗಿಲು ಮುಚ್ಚಿ ಉದ್ಧಟತನ ಪ್ರದರ್ಶಿಸಿದ್ದಾನೆ.

ಬನ್ನಿಗನೂರ ಮತಗಟ್ಟೆ ಸಂಖ್ಯೆ 03 ರಲ್ಲಿ ಮತದಾನ ಸ್ಥಗಿತಗೊಂಡಿದೆ. ಮತದಾನ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಅಭಿಷೇಕ್, ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದಾನೆ. ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೊಲೀಸ್​ ಸಿಬ್ಬಂದಿ ಸಿದ್ದರಾಜು ಮೇಲೆ ವ್ಯಕ್ತಿ ಹಲ್ಲೆ:
ಇನ್ನು ಇದೇ ರೀತಿ ಸಿಂಧನೂರು ತಾಲೂಕಿನ ದಿದ್ದಗಿ ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿದೆ. ಮತ ಹಾಕಲು ಕುಡಿದು ಮತಗಟ್ಟೆಗೆ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ ಪೊಲೀಸ್​ ಸಿಬ್ಬಂದಿ ಸಿದ್ದರಾಜು ಮೇಲೆ ವ್ಯಕ್ತಿ ಹಲ್ಲೆ ನಡೆಸಿದ್ದಾನೆ.

ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರ.. ಎಲ್ಲೆಲ್ಲಿ?

Published On - 2:23 pm, Sun, 27 December 20