ಧರ್ಮಸ್ಥಳದ ದೇಸಿ ಕಾರ್ ಮುಂದೆ ಟೆಸ್ಲಾದ ಎಲೆಕ್ಟ್ರಿಕ್ ಕಾರೂ ಮಂಡಿಯೂರುವುದೇ! ಕಾಲೆಳೆದ ಆನಂದ್ ಮಹೀಂದ್ರಾ ​

ಧರ್ಮಸ್ಥಳದ ದೇಸಿ ಕಾರ್ ಮುಂದೆ ಟೆಸ್ಲಾದ ಎಲೆಕ್ಟ್ರಿಕ್ ಕಾರೂ ಮಂಡಿಯೂರುವುದೇ! ಕಾಲೆಳೆದ ಆನಂದ್ ಮಹೀಂದ್ರಾ ​
ಆನಂದ್ ಮಹೀಂದ್ರಾ ಟ್ವೀಟ್ ಮಾಡಿರುವ ದೇಸಿ ಕಾರ್​

ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ದೇಸಿ ಕಾರ್​ಒಂದರ ವಿಡಿಯೋ ಟ್ವೀಟ್ ಮಾಡಿ ಎಲೆಕ್ಟ್ರಿಕ್ ಕಾರ್ ಉತ್ಪಾದಕ ಟೆಸ್ಲಾ ಕಂಪನಿಯ ಎಲನ್ ಟೆಸ್ಲಾರ ಕಾಲೆಳೆದಿದ್ದಾರೆ.

guruganesh bhat

|

Dec 27, 2020 | 3:05 PM

ಮಂಗಳೂರು: ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಸದಾ ಒಂದಿಲ್ಲೊಂದು ಕುತೂಹಲಕಾರಿ ವಿಷಯಗಳನ್ನು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ನಡೆದ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ‘ದೇಸಿ ಕಾರ್’ಒಂದರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಎಲೆಕ್ಟ್ರಿಕ್ ಕಾರ್ ಉತ್ಪಾದಕ ಟೆಸ್ಲಾ ಕಂಪನಿಯ ಸಿಇಒ ಎಲನ್ ಮಸ್ಕ್​ರ ಕಾಲೆಳೆದಿದ್ದಾರೆ.

ವಾಯುಮಾಲಿನ್ಯ ಇಳಿಕೆ, ತೈಲ ಉಳಿಕೆಯ ಉದ್ದೇಶಗಳಿಂದ ಇತ್ತೀಚಿಗೆ ಎಲೆಕ್ಟ್ಕಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್, ಕಾರ್​ಗಳು ಈಗೀಗ ಮುನ್ನೆಲೆಗೆ ಬರುತ್ತಿವೆ. ಟೆಲ್ಸಾ ಸಹ ಎಲೆಕ್ಟ್ರಿಕ್ ಕಾರ್​ಗಳನ್ನು ತಯಾರಿಸುತ್ತದೆ.

‘ಈ ದೇಸಿ ಕಾರ್​ಗಿಂತ ಕಡಿಮೆ ಖರ್ಚಿನಲ್ಲಿ ನೀವು ಕಾರ್ ತಯಾರಿಸಲಾರಿರಿ.. ಚಾರ್ಜ್ ಮಾಡುವ , ಡೀಸೆಲ್ ತುಂಬಿಸುವ ಯಾವ ತೊಂದರೆಯೂ ಇಲ್ಲ. ಆದರೆ ಮಿಥೇನ್ ಹೊರಸೂಸುವಿಕೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬಾರದು’ ಎಂದು ಬರೆದುಕೊಂಡಿದ್ದಾರೆ.ಈ ವೀಡಿಯೋ 4.33 ಲಕ್ಷ ವೀಕ್ಷಣೆ ಕಂಡಿದ್ದು, 5 ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ. ಟೆಸ್ಲಾ ಸಿಇಒಗೆ ಆನಂದ್ ಮಹೀಂದ್ರಾ ಹಾಕಿದ ಓಪನ್ ಚಾಲೆಂಜ್​ಗೆ ನೆಟ್ಟಿಗರು ಸಖತ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಅಂಬಾಸಿಡರ್ ಕಾರಿನ ಹಿಂಭಾಗವನ್ನು ಎತ್ತುಗಳು ಎಳೆಯುವಂತೆ ಈ ಕಾರನ್ನು ರಚಿಸಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ರಚಿಸಿದ ಈ ಕಾರ್​​ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಜನರ ಕುತೂಹಲಕ್ಕೆ ಕಾರಣವಾಗಿತ್ತು. ಈ ‘ದೇಸಿ ಕಾರ್’ನ ಹಿಂದೆ ಉಜಿರೆಯ ಎಸ್​ಡಿಎಂ ಐಟಿ ಕಾಲೇಜಿನ ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಶ್ರಮವಿದೆ ಎಂಬುದು ಗಮನಾರ್ಹ.

ದೇಸಿ ಕಾರೊಂದೇ ಅಲ್ಲದೇ, ಆಧುನಿಕ ಎತ್ತಿನ ಬಂಡಿಯನ್ನೂ ಧರ್ಮಸ್ಥಳದಲ್ಲಿ ಬಳಸಲಾಗುತ್ತಿದೆ. ಎತ್ತಿಗೆ ಆಯಾಸವಾಗದಂತೆ ನೆಲಕ್ಕೆ  ಭಾರವನ್ನು ಈ ಎತ್ತಿನ ಬಂಡಿಯನ್ನು ಇಳಿಬಿಡುವಂತೆ ವಿನ್ಯಾಸಗೊಳಿಸಲಾಗಿದೆ.

ಧರ್ಮಸ್ಥಳದಲ್ಲಿ ಬಳಸುತ್ತಿರುವ ಆಧುನಿಕ ಎತ್ತಿನ ಬಂಡಿ

ಭಾರತಕ್ಕೆ ಕಾಲಿಡೋಕೆ ಸಿದ್ಧವಾಯ್ತು ಟೆಸ್ಲಾ ಕಾರು: ಇದರ ಬೆಲೆ ಎಷ್ಟು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada