ರೆಡ್ ಸಿಗ್ನಲ್ ದಾಟಿ 500 ಮೀಟರ್ ಮುಂದೆ ಹೋದ ಟಾಟಾ ಎಕ್ಸ್​ಪ್ರೆಸ್ ರೈಲು; ಗಂಭೀರ ಕರ್ತವ್ಯಲೋಪ

ಕೆಂಪು ಸಿಗ್ನಲ್ ದಾಟಿ ರೈಲು ಮುಂದೆ ಹೋಗಿ ನಿಂತರೆ ಅದಕ್ಕೆ ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (SPAD) ಎಂಬ ತಾಂತ್ರಿಕ ಪದ ಬಳಸುತ್ತಾರೆ. ರೈಲ್ವೆ ಸುರಕ್ಷಾ ನಿಯಮ ಉಲ್ಲಂಘಿಸಿದ್ದಕ್ಕೆ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್​ನನ್ನು ಅಮಾನತು ಮಾಡಲಾಗಿದೆ.

ರೆಡ್ ಸಿಗ್ನಲ್ ದಾಟಿ 500 ಮೀಟರ್ ಮುಂದೆ ಹೋದ ಟಾಟಾ ಎಕ್ಸ್​ಪ್ರೆಸ್ ರೈಲು; ಗಂಭೀರ ಕರ್ತವ್ಯಲೋಪ
ಟಾಟಾ ಎಕ್ಸ್​ಪ್ರೆಸ್
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2020 | 2:12 PM

ಪಟನಾ: ಟಾಟಾ ನಗರ್​ನಿಂದ ದಾನಾಪುರ್​ಗೆ ಶನಿವಾರ ಬೆಳಗ್ಗೆ ಹೋಗುತ್ತಿದ್ದ ಟಾಟಾ ಎಕ್ಸ್​ಪ್ರೆಸ್ ಹಾಥಿದಾ ಜಂಕ್ಷನ್​ನಲ್ಲಿ ಕೆಂಪು ಸಿಗ್ನಲ್ ದಾಟಿ 500 ಮೀಟರ್ ಮುಂದೆ ಹೋಗಿ ನಿಂತ ಘಟನೆ ವರದಿಯಾಗಿದೆ

ಕೆಂಪು ಸಿಗ್ನಲ್ ದಾಟಿ ರೈಲು ಮುಂದೆ ಹೋಗಿ ನಿಂತರೆ ಅದಕ್ಕೆ ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (SPAD) ಎಂಬ ತಾಂತ್ರಿಕ ಪದ ಬಳಸುತ್ತಾರೆ. ರೈಲನ್ನು ಸರಿಯಾದ ಜಾಗದಲ್ಲಿ ನಿಲ್ಲಿಸದೆ ಅಪಾಯ ಸೂಚನೆಯನ್ನು ದಾಟಿ ಮುಂದುವರಿದು ರೈಲ್ವೆ ಸುರಕ್ಷಾ ನಿಯಮ ಉಲ್ಲಂಘಿಸಿದ್ದಕ್ಕೆ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್​ನನ್ನು ಅಮಾನತು ಮಾಡಲಾಗಿದೆ.

ಈ ರೀತಿಯ ಘಟನೆ ಸಂಭವಿಸಿದರೆ ತಕ್ಷಣವೇ ರೈಲು ಚಾಲಕನನ್ನು ಬಂಧಿಸಬೇಕು. ಆತ ಮದ್ಯಪಾನ ಅಥವಾ ಮಾದಕ ವಸ್ತು ಸೇವನೆ ಮಾಡಿದ್ದಾನೆಯೇ ಎಂದು ತಿಳಿಯಲು ರಕ್ತಪರೀಕ್ಷೆಗೊಳಪಡಿಸಬೇಕು ಎಂಬುದು ನಿಯಮದಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್​ನ​ನ್ನು ಸೇವೆಯಿಂದಲೇ ವಜಾ ಮಾಡಲಾಗುವುದು.

ರೈಲನ್ನು ನಿಲ್ಲಿಸಲು ಲೋಕೊ ಪೈಲಟ್ ಮತ್ತು ಸಹಾಯಕ ಲೋಕೊ ಪೈಲಟ್ ಮರೆತುಹೋದರೆ ಅಥವಾ ಬ್ರೇಕ್ ಸರಿಯಾಗಿ ಕೆಲಸ ಮಾಡಲಿಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಪೂರ್ವ ಮಧ್ಯ ರೈಲ್ವೆ (ಈಸಿಆರ್) ಅಧಿಕಾರಿಗಳ ಪ್ರಕಾರ ಲೋಕೊ ಪೈಲಟ್ ಸೂಕ್ತ ಸಮಯದಲ್ಲಿ ಬ್ರೇಕ್ ಹಾಕದೇ ಇದ್ದರೆ ಈ ರೀತಿ ರೈಲು ನಿರ್ದಿಷ್ಟ ನಿಲುಗಡೆಗಿಂತ ಮುಂದೆ ಹೋಗಿ ನಿಲ್ಲುತ್ತದೆ. ಒಂದು ವೇಳೆ ರೈಲ್ವೆ ಸಿಬ್ಬಂದಿ ಇನ್ನೊಬ್ಬರ ಜತೆ ಮಾತಿನಲ್ಲಿ ಮಗ್ನವಾಗಿದ್ದರೆ ಈ ರೀತಿ ಆಗುವ ಸಾಧ್ಯತೆಯೂ ಇರುತ್ತದೆ. ಮೊಕಮಾ ಜಂಕ್ಷನ್​ನಿಂದ ಹೊರಟ ನಂತರ ರೈಲು ವೇಗ ಪಡೆದುಕೊಳ್ಳುತ್ತದೆ. ಹಾಗಾಗಿ ಕೆಲವೊಮ್ಮೆ ರೈಲಿನ ಕೆಲವು ಬೋಗಿ ಅಥವಾ ಇಡೀ ರೈಲು , ರೈಲು ನಿಲ್ದಾಣಕ್ಕಿಂತ ಮುಂದೆ ಹೋಗಿ ನಿಲ್ಲುವ ಸಾಧ್ಯತೆಯೂ ಇರುತ್ತದೆ. ಎರಡು ರೈಲು ನಿಲ್ದಾಣಗಳ ನಡುವಿನ ಕೇವಲ 8 ಕಿಮೀ ಇದೆ ಎಂದಿದ್ದಾರೆ.

ಈ ರೀತಿಯ ಘಟನೆಗಳನ್ನು ತುಂಬಾ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ರೈಲ್ವೆ ನಿಯಮಗಳ ಕಡ್ಡಾಯ ಪಾಲನೆ ಆಗಲೇಬೇಕು. ಈ ರೀತಿಯ ಪ್ರಕರಣಗಳಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ರೈಲು ಎಷ್ಟು ದೂರ ಮುಂದೆ ಹೋಗಿ ನಿಂತಿದೆ ಎಂಬುದನ್ನು ಲೆಕ್ಕಹಾಕುವಂತೆ ಮೇಲ್ವಿಚಾರಕರಿಗೆ ನಿರ್ದೇಶಿಸುತ್ತಾರೆ. ರೈಲು ಅಲ್ಲಿಂದ ಹೊರಡುವ ಮುನ್ನ ಲೊಕೊ ಪೈಲಟ್​ನ್ನು ವಿಚಾರಣೆ ನಡೆಸಿ ಇತರ ಮಾಹಿತಿಗಳನ್ನು ಕಲೆ ಹಾಕಲಾಗುವುದು. ಹಿರಿಯ ಅಧಿಕಾರಿಗಳಿರುವ ನಾಲ್ವರು ಸದಸ್ಯರ ತಂಡಕ್ಕೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿರುವುದಾಗಿ ಈಸಿಆರ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.

ಭಾರತೀಯ ರೈಲ್ವೆ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ