ಮೋದಿ ‘ಮನ್ ಕಿ ಬಾತ್‘ಗೆ ಪಂಜಾಬ್ ರೈತರಿಂದ ತಟ್ಟೆ-ಚಮಚದ ಉತ್ತರ
ಪ್ರಧಾನಿ ನರೇಂದ್ರ ಮೋದಿಯವರ ಈ ವರ್ಷದ ಕೊನೆಯ ಮನ್ ಕಿ ಬಾತ್ಗೆ ಪಂಜಾಬ್ ರೈತರ ಘೋಷಣೆಗಳು ಪ್ರತಿರೋಧ ನೀಡಿದವು. ಚಪ್ಪಾಳೆ, ತಟ್ಟೆ-ಚಮಚ ಮತ್ತು ಡಬ್ಬಗಳ ಮೂಲಕ ಪಂಜಾಬ್ ರೈತರು ‘ಥಾಲಿ’ ಬಾರಿಸಿದರು.
ದೆಹಲಿ: ಪಂಜಾಬ್ ರೈತರು ಈ ಮುಂಚೆ ಘೋಷಿಸಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ನಡೆಯುವಾಗ ‘ಥಾಲಿ’ ಬಾರಿಸಿದ್ದಾರೆ. ಇಂದು ಬೆಳಗ್ಗೆ ಗಡಿಗಳಲ್ಲಿ ಮೆರವಣಿಗೆ ಆರಂಭಿಸಿದ ರೈತರು ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಟ್ಟೆ-ಚಮಚ, ಡಬ್ಬಗಳನ್ನು ಬಾರಿಸಿದ ರೈತರ ಘೋಷಣೆಗಳು ಮುಗಿಲು ಮುಟ್ಟಿದ್ದವು.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಒಂದು ತಿಂಗಳಿಂದ ಚಳವಳಿ ನಡೆಸುತ್ತಿರುವ ಪಂಜಾಬ್ ರೈತ ಸಮುದಾಯ, ಪ್ರಧಾನಿಯವರ ಮನದ ಮಾತನ್ನು ವಿರೋಧಿಸಲು ದೇಶದ ಜನತೆಗೆ ಕರೆ ನೀಡಿತ್ತು. ಕೊರೊನಾದ ಆರಂಭಿಕ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಟ್ಟಾಗಿ ಚಪ್ಪಾಳೆ, ಜಾಗಟೆ, ಶಂಖಗಳ ಥಾಲಿ ಬಾರಿಸಲು ಕರೆ ನೀಡಿದ್ದರು. ಪ್ರಧಾನಿಯವರ ನಿಲುವನ್ನು ವಿರೋಧಿಸಲು ಅದೇ ಮಾರ್ಗ ಅನುಸರಿಸಿದ ಪಂಜಾಬ್ ರೈತರು ಸಿಂಘು ಮತ್ತು ಘಾಜಿಪುರ ಗಡಿಗಳಲ್ಲಿ ಥಾಲಿ ಬಾರಿಸಿದರು.
ನೂತನ ಕೃಷಿ ಕಾಯ್ದೆ ವಿರೋಧಿಸಿ ಆತ್ಮಹತ್ಯೆ ನೂತನ ಕೃಷಿ ಕಾಯ್ದೆ ವಿರೋಧಿಸಿ ಜಲಾಲಾಬಾದ್ನ ವಕೀಲರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ಪತ್ರ ಬರೆದು ವಕೀಲ ಅಮರ್ ಜೀತ್ ಸಿಂಗ್, ದೆಹಲಿ ಟಿಕ್ರಿ ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘೋಷಣೆಯ ಭಂಗಿ ಭಾವ
Published On - 3:19 pm, Sun, 27 December 20