24 ವರ್ಷಗಳಿಂದ ತಲೆಮರೆಸಿಕೊಂಡಿದ್ದ.. ದಾವೂದ್ ಇಬ್ರಾಹಿಂ ಸಹಚರ ಕೊನೆಗೂ ಅಂದರ್
ಕಳೆದ 24 ನಾಲ್ಕು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಅಬ್ದುಲ್ ಮಜೀದ್, ಇಂದು ಜಾರ್ಖಂಡ್ನಲ್ಲಿ ಭಯೋತ್ಪಾದನಾ ವಿರೋಧಿ ದಳ (ATS) ಬಲೆಗೆ ಬಿದ್ದಿದ್ದಾನೆ.
ಅಹಮದಾಬಾದ್: ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಇಂದು ಬಂಧಿಸಲಾಗಿದೆ. ಗುಜರಾತ್ ಎಟಿಎಸ್ ತಂಡದವರಿಂದ ದಾವೂದ್ ಸಹಚರನಾದ ಅಬ್ದುಲ್ ಮಜೀದ್ ಕುಟ್ಟಿಯ ಬಂಧನವಾಗಿದೆ. ಕಳೆದ 24 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಅಬ್ದುಲ್ ಮಜೀದ್ ಕುಟ್ಟಿ, ಇಂದು ಜಾರ್ಖಂಡ್ನಲ್ಲಿ ಭಯೋತ್ಪಾದನಾ ನಿಗ್ರಹ ದಳ (ATS) ಬಲೆಗೆ ಬಿದ್ದಿದ್ದಾನೆ. ಶಸ್ತ್ರಾಸ್ತ್ರಗಳ ಡೀಲಿಂಗ್ ಪ್ರಕರಣದಲ್ಲಿ ಮಜೀದ್ ಸಿಕ್ಕಿಬಿದ್ದಿದ್ದು, ಈಗ ಎಟಿಎಸ್ ವಶದಲ್ಲಿದ್ದಾನೆ.
ಅಬ್ದುಲ್ ಮಜೀದ್ ಕುಟ್ಟಿ ಕೇರಳ ಮೂಲದವನಾಗಿದ್ದು, 1996ರ ಶಸ್ತ್ರಾಸ್ತ ಸಂಗ್ರಹ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿದ್ದ. 106 ಪಿಸ್ತೂಲ್, 750 ಸಿಡಿಮದ್ದುಗಳು ಮತ್ತು 4 ಕೆ.ಜಿ RDX ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದ. ಪ್ರಕರಣದ ಉಳಿದ ಆರೋಪಿಗಳನ್ನು 1996ರಲ್ಲೇ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಅಬ್ದುಲ್ ಮಜೀದ್ ಕುಟ್ಟಿ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ಆ ಬಳಿಕ ಮಜೀದ್ ತಲೆಮರೆಸಿಕೊಂಡಿದ್ದ. ಬಂಧಿತ ಆರೋಪಿಯನ್ನು ಸದ್ಯ ಕೊವಿಡ್ ಪರೀಕ್ಷೆಯ ಬಳಿಕ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ
Published On - 3:44 pm, Sun, 27 December 20