ಸಂಗೀತ ಸಂಜೆಯಲ್ಲಿ ಮಿಂದೆದ್ದ ಜೋಡಿ ಹಕ್ಕಿಗಳು; ಮೀಟ್ ಮೈ ಕ್ವೀನ್ ಎಂದ ಗೂಗ್ಲಿ ಮಾಸ್ಟರ್ ಚಹಲ್
ಇದೇ ತಿಂಗಳ 22 ರಂದು ವಿವಾಹವಾದ ಜೋಡಿ ಅಂದಿನಿಂದ ತಮ್ಮ ವಿವಾಹದ ವಿವಿದ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಸಂಗೀತ ಸಂಜೆಯಲ್ಲಿನ ಫೋಟೋಗಳನ್ನ ಪೋಸ್ಟ್ ಮಾಡಿರುವ ಚಹಲ್ ಮೀಟ್ ಮೈ ಕ್ವಿನ್ ಎಂಬ ಟ್ಯಾಗ್ ಲೈನ್ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಲ್ ಇತ್ತೀಚೆಗಷ್ಟೇ ಧನಶ್ರೀ ವರ್ಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೊಸ ಬದುಕಿಗೆ ಕಾಲಿರಿಸಿದ ನವ ಜೋಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ BCCI ಸೇರಿದಂತೆ ಹಲವು ಗಣ್ಯರು ಸಹ ಶುಭಾಶಯ ಕೋರಿದ್ದರು.
ಈಗ ಹೊಸ ಬದುಕು ಆರಂಭಿಸಿರುವ ಚಹಲ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮದುವೆ ಸಂಭ್ರಮದ ಸವಿಕ್ಷಣದ ಚಿತ್ರಗಳನ್ನು ಹಂಚಿಕೊಳ್ಳುತ್ತಿದೆ. ಮದುವೆಯ ನಂತರ ಸಂಗೀತ ಸಮಾರಂಭ ಆಯೋಜಿಸಿದ್ದ ಈ ಜೋಡಿ ಸಮಾರಂಭದಲ್ಲಿನ ಮಧುರ ಕ್ಷಣಗಳನನ್ನು ಹಂಚಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ, ನವದಂಪತಿಗಳು ಸಂಗೀತ ಸಂಜೆಯಲ್ಲಿ ಕ್ಲಿಕ್ಕಿಸಿಕೊಂಡಿದ್ದ ಒಂದೆರಡು ಆಪ್ತ ಕ್ಷಣಗಳ ಫೋಟೊಗಳನ್ನು ಚಹಲ್ ಪೋಸ್ಟ್ ಮಾಡಿದ್ದಾರೆ. ಇದೇ ತಿಂಗಳ 22ರಂದು ವಿವಾಹವಾದ ಜೋಡಿ ಅಂದಿನಿಂದ ತಮ್ಮ ವಿವಾಹದ ವಿವಿಧ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಸಂಗೀತ ಸಂಜೆಯಲ್ಲಿನ ಫೋಟೊಗಳನ್ನ ಪೋಸ್ಟ್ ಮಾಡಿರುವ ಚಹಲ್ ಮೀಟ್ ಮೈ ಕ್ವೀನ್ ಎಂಬ ಟ್ಯಾಗ್ಲೈನ್ ನೀಡಿದ್ದಾರೆ.
Meet my queen ❤️Sangeet day #DhanaSaidYuz pic.twitter.com/dwmVmTw8iC
— Yuzvendra Chahal (@yuzi_chahal) December 26, 2020
Published On - 1:14 pm, Sun, 27 December 20