India vs Australia 2nd Test | ಭಾರತಕ್ಕೆ 82 ರನ್ ಮುನ್ನಡೆ, ಶತಕ ಬಾರಿಸಿದ ರಹಾನೆಗೆ ಉತ್ತಮ ಸಾಥ್ ನೀಡಿದ ಜಡೇಜಾ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಎರಡನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದು, ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ. ಇದರೊಂದಿಗೆ ಎರಡನೇ ದಿನದ ಆಟವನ್ನು ಕೊನೆಗೊಳಿಸಿದೆ.
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಎರಡನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದು, ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ. ಇದರೊಂದಿಗೆ ಎರಡನೇ ದಿನದ ಆಟವನ್ನು ಕೊನೆಗೊಳಿಸಿದೆ.
82 ರನ್‌ಗಳ ಮುನ್ನಡೆ ಸಾಧಿಸಿರುವ ಭಾರತ ತಂಡದಲ್ಲಿ ಮೂರನೇ ದಿನದ ಆಟಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್ ಲಯ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಎರಡನೇ ದಿನ ಅಮೋಘ ಶತಕ ಪೂರೈಸಿದರು. ನಾಯಕ ರಹಾನೆಗೆ ಅದ್ಭುತ ಸಾಥ್ ನೀಡಿದ ಜಡೇಜಾ ಉತ್ತಮವಾಗಿ ಬ್ಯಾಟ್ ಮಾಡುವುದರ ಮೂಲಕ ಅಜೇಯರಾಗಿ ಉಳಿದಿದ್ದಾರೆ.
ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದ್ದ ಭಾರತ, ಎರಡನೇ ದಿನ ಪ್ರಮುಖ ಐದು ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ. ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಯುವ ಆಟಗಾರ ಶುಭಮನ್ ಗಿಲ್ 45 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ನಂತರ ಚೇತೇಶ್ವರ ಪೂಜಾರ ಕೂಡ 17 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ದಿನದ ಮೊದಲ ಓವರ್‌ನಲ್ಲೇ ತಂಡವು ಆರಂಭಿಕ ಆಟಗಾರ ಮಾಯಾಂಕ್ ಅಗರ್‌ವಾಲ್ ಅವರ ವಿಕೆಟ್ ಕಳೆದುಕೊಂಡಿತ್ತು.
ಈ ಮೂರು ವಿಕೆಟ್ಗಳ ನಂತರ ನಾಯಕ ರಹಾನೆ ಜೊತೆಗೂಡಿದ ಹನುಮ ವಿಹಾರಿ ಬ್ಯಾಟ್ ಹೆಚ್ಚು ಸದ್ದು ಮಾಡಲಿಲ್ಲ. 21 ರನ್ ಗಳಿಸಿ ಹನುಮ ವಿಹಾರಿ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ಪಂತ್ ಸಹ ಹೆಚ್ಚು ಹೊತ್ತು ಆಡಲಿಲ್ಲ. 29 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿರು. ಆದರೆ ನಾಯಕನಿಗೆ ಸಾಥ್ ನೀಡಿದ ಜಡೇಜಾ ತಾಳ್ಮೆಯ ಆಟಕ್ಕೆ ಮುಂದಾಗಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೆಲ್ಬೋರ್ನ್ ಟೆಸ್ಟ್ಗೆ ಮಳೆ ಅಡ್ಡಿಯಾಗುತ್ತಿದ್ದು, ಇಂದಿನ 2ನೇ ದಿನದಾಟವನ್ನು ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ನಿಲ್ಲಿಸಲಾಯಿತು. ಎರಡನೇ ದಿನದಲ್ಲಿ ಭಾರತ 224 ರನ್ ಗಳಿಸಿದೆ. ಒಟ್ಟಾರೆ ಭಾರತದ ಸ್ಕೋರ್ 277 ಕ್ಕೆ ತಲುಪಿದೆ. ಇದರೊಂದಿಗೆ ಭಾರತ 82 ರನ್‌ಗಳ ಮುನ್ನಡೆ ಸಾಧಿಸಿದೆ. ದಿನದ ಆಟದ ಕೊನೆಯಲ್ಲಿ ರಹಾನೆ 200 ಎಸೆತಗಳಲ್ಲಿ 104 ರನ್ ಮತ್ತು ರವೀಂದ್ರ ಜಡೇಜಾ 40 ರನ್ ಗಳಿಸಿದ್ದಾರೆ.
India vs Australia 2nd Test: ಟೀಂ ಇಂಡಿಯಾಗೆ ಆಸರೆಯಾದ ರಹಾನೆ ಶತಕ: ಇಲ್ಲಿದೆ ಚಿತ್ರನೋಟ
Published On - 2:23 pm, Sun, 27 December 20