AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy final 2026: ಜಮ್ಮು ಕಾಶ್ಮೀರ ವಿರುದ್ಧದ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ಉತ್ತರಾಖಂಡ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಕರ್ನಾಟಕ ತಂಡ 11 ವರ್ಷಗಳ ಬಳಿಕ ರಣಜಿ ಟ್ರೋಪಿಯ ಫೈನಲ್ ತಲುಪಿದೆ. ಈ ಮೂಲಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಸುದೀರ್ಘ ದಿನಗಳ ಕೊರಗಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. ಇನ್ನು ಫೆಬ್ರವರಿ 24ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಫೈನಲ್ ನಲ್ಲಿ ದೇವದತ್ ಪಡಿಕ್ಕಲ್ ಬಳಗ ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಜಮ್ಮು ಕಾಶ್ಮೀರ ತಂಡವನ್ನು ಎದುರಿಸಲಿದ್ದು, ಇದಕ್ಕೆ ತಂಡವನ್ನು ಸಹ ಪ್ರಕಟಿಸಲಾಗಿದೆ. ಹಾಗಾದ್ರೆ, ಫೈನಲ್ ಪಂದ್ಯದಲ್ಲಿ ಯಾರೆಲ್ಲಾ ಆಡಲಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

Ranji Trophy final 2026:  ಜಮ್ಮು ಕಾಶ್ಮೀರ ವಿರುದ್ಧದ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ
Karnataka
ರಮೇಶ್ ಬಿ. ಜವಳಗೇರಾ
|

Updated on:Feb 20, 2026 | 6:14 PM

Share

ಬರೋಬ್ಬರಿ 11 ವರ್ಷದ ಬಳಿಕ ಕರ್ನಾಟಕ (Karnataka) ಕ್ರಿಕೆಟ್ ತಂಡ ರಣಜಿ ಟ್ರೋಫಿ (Ranji Trophy) ಫೈನಲ್‌ ಪ್ರವೇಶಿಸಿದೆ. ಉತ್ತರಾಖಂಡ(Uttarakhand) ವಿರುದ್ಧದ ಸೆಮಿಫೈನಲ್​​ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದರಿಂದ ಕರ್ನಾಟಕ ಸುಲಭವಾಗಿ ಫೈನಲ್‌ ಪ್ರವೇಶಿಸಿದ್ದು,  ಫೆಬ್ರವರಿ 24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ  ಫೈನಲ್‌ (Final) ಪಂದ್ಯದಲ್ಲಿ ಜಮ್ಮು ಕಾಶ್ಮೀರ (Jammu Kashmir) ತಂಡವನ್ನು ಎದುರಿಸಲಿದೆ. ಹೀಗಾಗಿ ಅಂತಿಮ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಂನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಸೆಮಿಫೈನಲ್​​​ ಆಡಿದ ತಂಡವೇ ಫೈನಲ್​​​​​​​ ನಲ್ಲಿ ಕಣಕ್ಕಿಳಿಯಲಿದೆ.

ಫೈನಲ್​ ಮ್ಯಾಚ್​​​ಗೆ ಪ್ರಕಟಿಸಲಾದ 15 ಆಟಗಾರರ ತಂಡವನ್ನು ನೋಡಿದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಲಿಷ್ಠವಾಗಿದೆ. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ. ಹೀಗೆ ಸಾಲು ಸಾಲು ದಾಂಡಿಗರು ಇದ್ದಾರೆ.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

ಲಕ್ನೋನ ಎಕಾನ ಮೈದಾನದಲ್ಲಿ ಉತ್ತರಾಖಂಡದ ವಿರುದ್ಧದ ಸೆಮೀಸ್​​ನಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಕರ್ನಾಟಕ ತಂಡ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿತು. ನಾಯಕ ದೇವದತ್​ ಪಡಿಕ್ಕಲ್​ ಡಬಲ್​ ಸೆಂಚುರಿ ಬಾರಿಸಿದ್ರೆ, ಕೆ.ಎಲ್​ ರಾಹುಲ್, ಸ್ಮರಣ್​ ರವಿಚಂದ್ರನ್ ಶತಜ ಸಿಡಿಸಿ ಮಿಂಚಿದ್ದರು. ಕೃತಿಕ್ ಕೃಷ್ಣ, ವಿದ್ಯಾದರ್​ ಪಾಟೀಲ್​ ಆಫ್​ ಸೆಂಚುರಿ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗೆ ಕರ್ನಾಟಕ ಬ್ಯಾಟ್ಸ್​​ಮನ್​ಗಳು ಫಾರ್ಮ್​​ನಲ್ಲಿದ್ದು, ಫೈನಲ್​​​ನಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಇನ್ನು ಕರ್ನಾಟಕ ಬೌಲಿಂಗ್ ವಿಭಾಗದಲ್ಲೂ ಸಹ ಸ್ಟ್ರಾಂಗ್ ಆಗಿದೆ. ಸೆಮೀಸ್​​ನಲ್ಲಿ ವಿಧ್ಯಾದರ್​ ಪಾಟೀಲ್, ವೈಶಾಕ್ ವಿಜಯ್ ಕುಮಾರ್​ ಬಿರುಗಾಳಿಯ ದಾಳಿ ಸಂಘಟಿಸಿದ್ರೆ, ಶ್ರೇಯಸ್​ ಗೋಪಾಲ್ ಸ್ಪಿನ್ ಮ್ಯಾಜಿಕ್ ಮಾಡಿದ್ದರು. ಶಿಖರ್​​ ಶೆಟ್ಟಿ, ಪ್ರಸಿದ್ಧ್​​ ಕೃಷ್ಣ ಕೂಡ ಬ್ಯಾಟರ್ಸ್​ಗೆ ಕಾಟ ಕೊಟ್ಟಿದ್ದರು. ಇದರಿಂದ ಕನ್ನಡಿಗರ ಸಂಘಟಿತ ದಾಳಿಗೆ ಉತ್ತರಾಖಾಂಡ ಉಡೀಸ್​ ಆಯ್ತು. ಇದೇ ಪರ್ಫಾಮೆನ್ಸ್​ ಫೈನಲ್​​​ನಲ್ಲೂ ತೋರಿದರೆ ಕರ್ನಾಟಕ ಪ್ರಶಸ್ತಿಗೆ ಮುತ್ತಿಕ್ಕುವುದು  ಗ್ಯಾರಂಟಿ.

ಇದನ್ನೂ ಓದಿ: 11 ವರ್ಷಗಳ ಬಳಿಕ ಫೈನಲ್​ಗೇರಿದ ಕರ್ನಾಟಕ

ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್, ವಿಜಯಕುಮಾರ್ ವೈಶಾಕ್.

ಹುಬ್ಬಳ್ಳಿಯಲ್ಲಿ ಫೈನಲ್​ ಕದನ

ಈ ಸೀಸನ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಫೈನಲ್​​ಗೆ ಎಂಟ್ರಿ ಕೊಟ್ಟಿದೆ. ಅತ್ತ ರಣಜಿ ಟ್ರೋಫಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್​ಗೆ ಬಂದಿದೆ. ಕರ್ನಾಟಕ ತಂಡ 9ನೇ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ರೆ, ಜಮ್ಮು ಕಾಶ್ಮೀರ ಚೊಚ್ಚಲ ಟ್ರೋಫಿ ಗೆಲುವಿನ ಕನವರಿಕೆಯಲ್ಲಿದೆ. ಹೀಗಾಗಿ ಹುಬ್ಬಳ್ಳಿಯ ರಾಜ್​ನಗರ್​ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್​ ಕದನ ರೋಚಕತೆ ಪಡೆಯಲಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಪಕ್ಕಾ.

Published On - 6:11 pm, Fri, 20 February 26

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ