ಬೆಂಗಳೂರು: ನಗರದ ವಾಣಿ ವಿಲಾಸ್ ಕಾಲೇಜು ಬಳಿಯ ಜಲಕಂಠೇಶ್ವರ ದೇಗುಲದ ಹತ್ತಿರ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆಯಾಗಿದ್ದವು. ಹೀಗಾಗಿ ಸದ್ಯ ಈಗ ಜಲಕಂಠೇಶ್ವರ ದೇಗುಲಕ್ಕೆ ಶಾಸಕ ಉದಯ್ ಗರುಡಾಚಾರ್ ಭೇಟಿ ನೀಡಿ ಪತ್ತೆಯಾದ ಶಾಸನಗಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಗರುಡಾಚಾರ್ ‘ಈ ಹಿಂದೆ ಇಲ್ಲಿ ಕಲ್ಯಾಣಿ ಇತ್ತು ಎಂದು ಸ್ಥಳೀಯರು, ಹಿರಿಯರು, ದೀಕ್ಷಿತರು ಮಾಹಿತಿ ನೀಡಿದ್ದಾರೆ. ಆದರೆ ಕಾಲ ಕ್ರಮೇಣ ಅದು ಮುಚ್ಚಿ ಹೋಗಿರಬಹುದು. ಕಾಲೇಜಿನ ಹೊಸ ಕಟ್ಟಡಕ್ಕೆ ಪಾಯ ತೆಗೆಯುವ ಕೆಲಸ ಶುರು ಮಾಡಿದ್ದರಿಂದ ಶಿಲಾ ಶಾಸನಗಳು ಮೇಲೆ ಬರುತ್ತಿವೆ. ಕೆಂಪೇಗೌಡರ ಕಾಲದಿಂದಲೂ ನಗರದ ಹಲವೆಡೆ ಕೊಳ, ಶಾಸನಗಳು ಸಿಕ್ಕಿವೆ. ಇದು ನೂರಾರು ವರ್ಷಗಳಷ್ಟು ಹಳೆಯ ಜಾಗ ಎಂದು ಹೇಳಿದ್ರು.
ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡೋದು ಬೇಡ
ಈ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡೋದು ಬೇಡ. ಈ ಸ್ಥಳವನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ. ಹಲವು ಶಾಸನಗಳು ಸಿಗುತ್ತೆ ಎಂಬ ನಂಬಿಕೆ ಇದೆ. ಈ ಬಗ್ಗೆ ಮುಜರಾಯಿ ಇಲಾಖೆ, ಬಿಬಿಎಂಪಿ ಜೊತೆ ಮಾತನಾಡಿದ್ದೇನೆ. ಈ ಜಾಗ ಅದ್ಭುತ ಸ್ಥಳವಾಗಿ ಪರಿವರ್ತನೆ ಆಗಬೇಕು ಎಂದು ಹೇಳಿದ್ರು.
ವಾಣಿ ವಿಲಾಸ ಶಿಕ್ಷಣ ಸಂಸ್ಥೆ ಒಡೆತನದ ಜಾಗದಲ್ಲಿ ಕಾಲೇಜಿನ ಹೊಸ ಕಟ್ಟಡಕ್ಕೆ ಪಾಯ ತೆಗೆಯುವಾಗ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ ಬಳಿಯ ಜಲಕಂಠೇಶ್ವರ ದೇಗುಲದ ಹತ್ತಿರ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆಯಾಗಿದ್ದವು.
ವಾಣಿ ವಿಲಾಸ್ ಕಾಲೇಜು ಬಳಿ ಪಾಯ ತೆಗೆಯುವ ವೇಳೆ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳು ಪತ್ತೆ