ಹುಬ್ಬಳ್ಳಿ: ಮೂರು ಸಾವಿರ ಮಠದ ಆಸ್ತಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ, ಮಠದ ಆಸ್ತಿ ಗೊಂದಲಕ್ಕೆ ಮಠದ ಉನ್ನತ ಸಮಿತಿ ಕಾರಣ ಎಂದು ಮಾಜಿ ಶಾಸಕ ನಾಗರಾಜ್ ಛಬ್ಬಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ತಿ ವಿವಾದದ ಬಗ್ಗೆ ಬಹಿರಂಗ ಚರ್ಚೆಯಿಂದ ನೋವಾಗಿದೆ. ಆಸ್ತಿ ವಿವಾದ ಸದ್ಯ ನಡೆಯುತ್ತಿರುವ ಬೆಳವಣಿಗೆ ಸರಿಯಲ್ಲ. ಭಕ್ತರ ಶ್ರದ್ಧಾ ಕೇಂದ್ರದಲ್ಲಿ ನಡೆಯುತ್ತಿರುವ ಆರೋಪ- ಪ್ರತ್ಯಾರೋಪ ಮಠದ ಘನತೆಗೆ ಚ್ಯುತಿ ತರುತ್ತವೆ. ಉನ್ನತ ಸಮಿತಿಗೆ ರಾಜಕಾರಣಿಗಳನ್ನ ಸೇರಿಸಿಕೊಂಡಿದ್ದೇ ತಪ್ಪು ಎಂದು ಉನ್ನತ ಸಮಿತಿಯ ವಿರುದ್ಧ ಮಾಜಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಮೂರು ಸಾವಿರ ಮಠದ ಭೂ ವಿವಾದ: ಮಠದ ಆಸ್ತಿ ಹಿಂದಿರುಗಿಸುವಂತೆ ಕೆಎಲ್‌ಇ ವಿರುದ್ಧ ಸಮರಕ್ಕಿಳಿದ ಭಕ್ತರು