ಬೆಂಗಳೂರು: ಕಲಾಪದ ವೇಳೆ ನಾನು ನನ್ನ ಮೊಬೈಲ್ನ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ.. ಮುಂದೆ ನನ್ನದೇ ಪ್ರಶ್ನೆ ಕೇಳುವುದಿತ್ತು, ಅದಕ್ಕಾಗಿ ಮಾಹಿತಿ ಹುಡುಕುತ್ತಿದ್ದೆ. ಹಾಗೆ ಡಾಕ್ಯುಮೆಂಟ್ ಹುಡುಕುವಾಗ ಹೆಚ್ಚಾದ ಪೋಟೋ ಡಿಲೀಟ್ ಮಾಡುತ್ತಿದ್ದೆ. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸ್ಪಷ್ಟನೆ ಕೊಟ್ಟಿದ್ದಾರೆ.
ಏನಾಯಿತೆಂದರೆ ಇಂದು ಬೆಳಗ್ಗೆ ಮೇಲ್ಮನೆ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್ ರಾಥೋಡ್ ಮೊಬೈಲ್ನಲ್ಲಿ ತಮ್ಮ ಕಣ್ಣುನೆಟ್ಟಿದ್ದರು. ಅದು ಕೆಲವರ ಗಮನಕ್ಕೂ ಬಂತು. ತಕ್ಷಣ ಏನು ನೋಡ್ತಿದ್ದಿರಿ ಎಂದು ಕಿಚಾಯಿಸಿದಾಗ ಪ್ರಕಾಶ್ ರಾಥೋಡ್ ಮೇಲಿನಂತೆ ಸ್ಪಷ್ಟನೆ ಕೊಟ್ಟರು.
ನನಗೆ ಮಾಹಿತಿ ಬೇಕಾಗಿದ್ದನ್ನು ನಾನು ಹುಡುಕಾಡ್ತಿದ್ದೆ ಅಷ್ಟೆ. ಆಗ ಗ್ಯಾಲರಿ ಫುಲ್ ಆಗಿದೆ ಅಂತಾ ಫೊಟೊಗಳನ್ನು ಡಿಲೀಟ್ ಮಾಡ್ತಿದ್ದೆ. ಅಂಥಾ ಫೋಟೋ ನಾನು ನೋಡೋದೂ ಇಲ್ಲ, ಅಂಥಾ ಫೊಟೊ ನನ್ನ ಬಳಿ ಇಲ್ಲವೂ ಇಲ್ಲ ಎಂದು ರಾಥೋಡ್ ಹೇಳಿಕೆ ನೀಡಿದ್ದಾರೆ. ಈ ವಿಚಾರವನ್ನು ಬೇರೆ ತರಹ ಬಿಂಬಿಸಬೇಡಿ ಎಂದು ರಾಥೋಡ್ ಹೇಳಿದ್ದಾರೆ.
Published On - 3:23 pm, Fri, 29 January 21