ಬೆಂಗಳೂರು: ನಕಲಿ ಕೀ ಬಳಸಿ ಮೊಬೈಲ್ ಶೋ ರೂಮ್‌ನಲ್ಲಿ ಕಳ್ಳತನ ಮಾಡಿರುವ ಘಟನೆ ಇಂದಿರಾನಗರದಲ್ಲಿರುವ ಶೋ ರೂಮ್ ಒಂದರಲ್ಲಿ ನಡೆದಿದೆ. ಖತರ್ನಾಕ್ ಖದೀಮರು ಇಂದಿರಾನಗರದ ಹಂಡ್ರೆಡ್ ಫೀಟ್ ರಸ್ತೆಯ ರಿಲಾಯನ್ಸ್ ಶೋ ರೂಮ್‌ನಲ್ಲಿ ತಡ ರಾತ್ರಿ ತಮ್ಮ ಕೈಚಳಕ ತೋರಿಸಿದ್ದಾರೆ.
ನಕಲಿ ಕೀ ಬಳಸಿ ರಿಲಾಯನ್ಸ್ ಫ್ರೆಶ್ ಟೆರೇಸ್ ಬಳಿಯ ಡೋರ್ ಓಪನ್ ಮಾಡಿ ಶೋ ರೂಮ್ಗೆ ನುಗ್ಗಿ ವಿವಿಧ ಬ್ರಾಂಡ್ನ 23 ಆ್ಯಂಡ್ರಾಯ್ಡ್ ಮೊಬೈಲ್‌ಗಳು, 6 ಐಫೋನ್‌ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಸದ್ಯ ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾಗಿರಿಯ 4 ಅಂಗಡಿಗಳಲ್ಲಿ ಕಳ್ಳತನ: ಕಳ್ಳರ ಪತ್ತೆ ಹಚ್ಚಲು ಶ್ವಾನದಳದ ನೆರವು