ಮಂಗಳೂರು ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ದುರಂತ ನಡೆದರೆ ಅಪಾಯ ತಡೆಗಟ್ಟುವ ಬಗ್ಗೆ ಅಣಕು ಪ್ರದರ್ಶನ

| Updated By: ganapathi bhat

Updated on: Mar 20, 2021 | 10:33 PM

ಎಎಸ್​ಎಫ್ ರಾಸಾಯನಿಕ ತಯಾರಿಕಾ ಕಾರ್ಖಾನೆ ರಾಸಾಯನಿಕ ಉತ್ಪಾದನೆಗೆ ಸ್ಟೈರಿನ್ ಗ್ಯಾಸ್ ಬಳಸುವುದಾಗಿದ್ದು, 25 ಟನ್‌ನ 2 ಸ್ಟೈರಿನ್ ಗ್ಯಾಸ್ ಟ್ಯಾಂಕ್ ಹೊಂದಿರುವ ಕಾರ್ಖಾನೆ ಇದಾಗಿದೆ.

ಮಂಗಳೂರು ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ದುರಂತ ನಡೆದರೆ ಅಪಾಯ ತಡೆಗಟ್ಟುವ ಬಗ್ಗೆ ಅಣಕು ಪ್ರದರ್ಶನ
ಬಿಎಎಸ್​ಎಫ್ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಅಣಕು ಪ್ರದರ್ಶನ
Follow us on

ದಕ್ಷಿಣ ಕನ್ನಡ: ದುರಂತ ನಡೆದರೆ ಅಪಾಯ ತಡೆಗಟ್ಟುವ ಬಗ್ಗೆ ಮಂಗಳೂರಿನ ಕೂಳೂರಿನ ಬಾಳಾ ಗ್ರಾಮದ ಬಿಎಎಸ್​ಎಫ್ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಅಣಕು ಪ್ರದರ್ಶನ ಮಾಡಲಾಯಿತು. ಎನ್​ಡಿಆರ್​ಎಫ್, ಸಿಐಎಸ್​ಎಫ್, ಎಸ್​ಡಿಆರ್​ಎಫ್​, ಅಗ್ನಿಶಾಮಕ ಇಲಾಖೆ ಹಾಗೂ ಜಿಲ್ಲಾಡಳಿತದ ಇಲಾಖೆಗಳಿಂದ ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಡೆಮೋ ಸ್ಟೈರಿನ್ ಗ್ಯಾಸ್ ಸೋರಿಕೆಯಾದರೆ ನಡೆಸುವ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಾಯಿತು.

ವಿಶಾಖಪಟ್ಟಣದಲ್ಲಿ ದುರಂತಕ್ಕೆ ಕಾರಣವಾಗಿದ್ದ ಸ್ಟೈರಿನ್ ಗ್ಯಾಸ್ ವೈಜಾಗ್‌ ಹಿನ್ನೆಲೆಯಲ್ಲಿ ಮಂಗಳೂರಲ್ಲೂ ರಾಸಾಯನಿಕ ದುರಂತ ಸಂಭವಿಸಿದರೆ ತಡೆಗಟ್ಟುವ ಬಗ್ಗೆ ಅಣುಕು ಪ್ರದರ್ಶನ ಮಾಡಲಾಗಿದೆ. ಎಎಸ್​ಎಫ್ ರಾಸಾಯನಿಕ ತಯಾರಿಕಾ ಕಾರ್ಖಾನೆ ರಾಸಾಯನಿಕ ಉತ್ಪಾದನೆಗೆ ಸ್ಟೈರಿನ್ ಗ್ಯಾಸ್ ಬಳಸುವುದಾಗಿದ್ದು, 25 ಟನ್‌ನ 2 ಸ್ಟೈರಿನ್ ಗ್ಯಾಸ್ ಟ್ಯಾಂಕ್ ಹೊಂದಿರುವ ಕಾರ್ಖಾನೆ ಇದಾಗಿದೆ.

ಶಿವಮೊಗ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ರೈತ ಸಮಾವೇಶ:
ಶಿವಮೊಗ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ದಕ್ಷಿಣ ಭಾರತದ ಮೊಟ್ಟಮೊದಲ ರೈತ ಮಹಾಪಂಚಾಯತ್ ಸಮಾವೇಶ ನಡೆದಿದೆ. ಈ ರೈತ ಸಮಾವೇಶದಲ್ಲಿ ಅನ್ನದ ಋಣ ಎಂಬ ನೂತನ ವೆಬ್‌ಸೈಟ್‌ ಅನ್ನು ಬಿಡುಗಡೆ ಮಾಡಲಾಗಿದೆ. ಫಾದರ್ ವೀರೇಶ್‌ ಈ ಅನ್ನದ ಋಣ ವೆಬ್‌ಸೈಟ್‌ ಬಿಡುಗಡೆ ಮಾಡಿದ್ದು, ವೆಬ್‌ಸೈಟ್‌ನಲ್ಲಿ ರೈತರ ಹೋರಾಟಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ.

ಶಿವಮೊಗ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ರೈತ ಸಮಾವೇಶ

ಶಿವಮೊಗ್ಗ ನಗರದ ಸೈನ್ಸ್ ಮೈದಾನದ ರೈತ ಮಹಾ ಪಂಚಾಯತ್ ವೇದಿಕೆಯಲ್ಲಿ ನಡೆದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ರಾಕೇಶ್ ಟಿಕಾಯತ್, ಡಾ. ದರ್ಶನ ಪಾಲ್, ಯುದ್ಧವೀರ ಸಿಂಗ್ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:

ಕಾಲೇಜು ಕಲಿಕೆ ತ್ಯಜಿಸಿ ವಿಶ್ವದ ಗಮನ ಸೆಳೆದ ಖ್ಯಾತನಾಮರು ಯಾರ್ಯಾರು ಗೊತ್ತೇ? ಸ್ಫೂರ್ತಿ ಕತೆಯನ್ನು ನೀವೂ ತಿಳಿದುಕೊಳ್ಳಿ

ಬಾಕಿ ಹಣ ನೀಡದೆ ಸತಾಯಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು: ಕಾನೂನು ಹೋರಾಟಕ್ಕೆ ತಯಾರಿ ನಡೆಸಿರುವ ಯಾದಗಿರಿ ರೈತರು