ಬೆಂಗಳೂರು: ಖಾಸಗಿ ಬಸ್ ಮಾಲೀಕರ ಸಂಘವು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಸೋಮವಾರ (ಡಿ.14) ಖಾಸಗಿ ಬಸ್ಗಳ ಸಂಚಾರವೂ ರಾಜ್ಯದಲ್ಲಿ ಸ್ತಬ್ಧವಾಗಲಿದೆ.
ಫ್ರೀಡಂಪಾರ್ಕ್ನಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಖಾಸಗಿ ಬಸ್ ಓಡಾಟ ಬಂದ್ ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೋರಾಟಗಳು ಬ್ರೋಕರ್ಗಳ ಕೈಯಲ್ಲಿ ಇರಬಾರದು. ನಾನು ಬಿಜೆಪಿಯವನಾಗಿ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ. ಇದು ಸಾರಿಗೆ ಸಚಿವ ಸವದಿಯವರ ವೈಫಲ್ಯ. ನಾವು ಕೊಟ್ಟಿದ್ದ ಹಲವಾರು ಮನವಿಗಳು ಕಸದ ಬುಟ್ಟಿಯಲ್ಲಿವೆ. ಪೊಳ್ಳು ಭರವಸೆಗಳಿಗೆ ಯಾರೂ ಕೂಡ ಬಗ್ಗಬೇಡಿ ಎಂದು ನೌಕರರ ಬಳಿ ಕೋರಿದ್ದಾರೆ.
ಸರ್ಕಾರಿ ಬಸ್ಗಳಿಲ್ಲದಿದ್ದರೆ ಖಾಸಗಿ ಬಸ್ನಲ್ಲಿ ಓಡಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅವರಿಗೂ ಈಗ ನಟರಾಜ್ ಶಾಕ್ ನೀಡಿದ್ದಾರೆ. ನಾಳೆ ಯಾವುದೇ ಖಾಸಗಿ ಬಸ್ ರಸ್ತೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಉಲ್ಟಾ ಹೊಡೆದಿದ್ದ ಚಂದ್ರು
ವಿಕಾಸಸೌಧದಲ್ಲಿ ಇಂದು KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿ ಅನೇಕರು ಸಂಧಾನ ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಹೊರ ಬಂದ ನಂತರ ಮಾತನಾಡಿದ್ದ ಚಂದ್ರು, ಸಂಧಾನ ಯಶಸ್ವಿ ಆಗಿದೆ ಎಂದು ಹೇಳಿದ್ದರು. ಆದರೆ, ಫ್ರೀಂಡಂ ಪಾರ್ಕ್ ಬಂದ ನಂತರದಲ್ಲಿ ಚಂದ್ರು ಉಲ್ಟಾ ಹೊಡೆದಿದ್ದರು. ಸರ್ಕಾರದ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕಿದೆ. ಈಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ, ಯಾರೂ ಬಸ್ ತೆಗೆಯಬಾರದು ಎಂದು ಕೋರಿದ್ದರು.
ಮುಷ್ಕರ ಮುಂದುವರಿಯಲಿದೆ, ಯಾರೂ ಬಸ್ ತೆಗೆಯಬೇಡಿ -ಸರ್ಕಾರಕ್ಕೆ ಮತ್ತೆ ಶಾಕ್ ಕೊಟ್ಟ ಸಾರಿಗೆ ನೌಕರರು