AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ರಾಜ್ಯದಲ್ಲಿ ಮುಂಗಾರು ಬಿರುಸು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

Karnataka Reservoirs water level: ರಾಜ್ಯದಲ್ಲಿ ಕೊಂಚ ಕ್ಷೀಣಿಸಿದ್ದ ಮುಂಗಾರು ಮಳೆ ಮತ್ತೆ ಬಿರುಸುಗೊಂಡಿದೆ. ಅಲ್ಲಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಆದರೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಲು ಇನ್ನೂ ಸಾಕಷ್ಟು ಮಳೆಯಾಗಬೇಕಿದೆ. ಈ ಮೊದಲು ಜುಲೈ ಮಧ್ಯ ಭಾಗದಲ್ಲಿ ರಾಜ್ಯದ ಜಲಾಶಯಗಳು ತುಂಬುತ್ತಿದ್ದವು.

Karnataka Dam Water Level: ರಾಜ್ಯದಲ್ಲಿ ಮುಂಗಾರು ಬಿರುಸು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
Karnataka Dams: ರಾಜ್ಯದಲ್ಲಿ ಮುಂಗಾರು ಬಿರುಸು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jul 08, 2021 | 8:54 AM

Share

ಬೆಂಗಳೂರು: ರಾಜ್ಯದಲ್ಲಿ ಕೊಂಚ ಕ್ಷೀಣಿಸಿದ್ದ ಮುಂಗಾರು ಮಳೆ ಮತ್ತೆ ಬಿರುಸುಗೊಂಡಿದೆ. ಅಲ್ಲಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಆದರೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಲು ಇನ್ನೂ ಸಾಕಷ್ಟು ಮಳೆಯಾಗಬೇಕಿದೆ. ಈ ಮೊದಲು ಜುಲೈ ಮಧ್ಯ ಭಾಗದಲ್ಲಿ ರಾಜ್ಯದ ಜಲಾಶಯಗಳು ತುಂಬುತ್ತಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಾರಿಯೂ ಮಳೆ ಚೆನ್ನಾಗಿ ಆದರೆ, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಜಲಾಶಯಗಳು ತುಂಬಿತುಳುಕಲಿವೆ. ಆದರೆ ಸದ್ಯಕ್ಕೆ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗೆ ಯಾವುದೇ ಬಾಧಕವಿಲ್ಲ.

ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್​ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

ಕಾವೇರಿ ಕಣಿವೆ ಭಾಗದ ಜಲಾಶಯಗಳು:

1) ಕೆಆರ್​ಎಸ್​ ಜಲಾಶಯ | KRS Dam ಇಂದಿನ ನೀರಿನ ಮಟ್ಟ: 89.82 ಅಡಿ ಗರಿಷ್ಠ ಸಾಮರ್ಥ್ಯ: 124.80 ಅಡಿ

2) ಹಾರಂಗಿ ಜಲಾಶಯ | Harangi Dam ಇಂದಿನ ನೀರಿನ ಮಟ್ಟ: 2843 ಅಡಿ ಗರಿಷ್ಠ ಸಾಮರ್ಥ್ಯ: 2859 ಅಡಿ

3) ಹೇಮಾವತಿ ಜಲಾಶಯ | Hemavathi Dam ಇಂದಿನ ನೀರಿನ ಮಟ್ಟ: 2896 ಅಡಿ ಗರಿಷ್ಠ ಸಾಮರ್ಥ್ಯ: 2922 ಅಡಿ

4) ಕಬಿನಿ ಜಲಾಶಯ | Kabini Dam ಇಂದಿನ ನೀರಿನ ಮಟ್ಟ: 2276 ಅಡಿ ಗರಿಷ್ಠ ಸಾಮರ್ಥ್ಯ: 2284 ಅಡಿ

ಜಲ ವಿದ್ಯುತ್​ ಅಣೆಕಟ್ಟೆಗಳು:

5) ಲಿಂಗನಮಕ್ಕಿ ಜಲಾಶಯ | Linganamakki Dam ಇಂದಿನ ನೀರಿನ ಮಟ್ಟ: 1784 ಅಡಿ ಗರಿಷ್ಠ ಸಾಮರ್ಥ್ಯ: 1819 ಅಡಿ

6) ಸೂಪಾ ಜಲಾಶಯ | Supa Dam ಇಂದಿನ ನೀರಿನ ಮಟ್ಟ: 538 ಅಡಿ ಗರಿಷ್ಠ ಸಾಮರ್ಥ್ಯ: 564 ಅಡಿ

ಕೃಷ್ಣಾ ನದಿ ಭಾಗದ ಜಲಾಶಯಗಳು:

7) ತುಂಗಾಭದ್ರಾ ಜಲಾಶಯ | Tungabhadra Dam ಇಂದಿನ ನೀರಿನ ಮಟ್ಟ: 1610 ಅಡಿ ಗರಿಷ್ಠ ಸಾಮರ್ಥ್ಯ: 1609 ಅಡಿ

8) ಭದ್ರಾ ಜಲಾಶಯ | Bhadra Dam ಇಂದಿನ ನೀರಿನ ಮಟ್ಟ: 156 ಅಡಿ ಗರಿಷ್ಠ ಸಾಮರ್ಥ್ಯ: 186 ಅಡಿ

9) ಮಲಪ್ರಭಾ ಜಲಾಶಯ | Malaprabha Dam ಇಂದಿನ ನೀರಿನ ಮಟ್ಟ: 2063 ಅಡಿ ಗರಿಷ್ಠ ಸಾಮರ್ಥ್ಯ: 2063 ಅಡಿ

10) ಘಟಪ್ರಭಾ ಜಲಾಶಯ | Ghataprabha Dam ಇಂದಿನ ನೀರಿನ ಮಟ್ಟ: 2140 ಅಡಿ ಗರಿಷ್ಠ ಸಾಮರ್ಥ್ಯ: 2175 ಅಡಿ

11) ನಾರಾಯಣಪುರ ಜಲಾಶಯ | Narayanpur Dam ಇಂದಿನ ನೀರಿನ ಮಟ್ಟ: 490.03 ಮೀಟರ್ ಗರಿಷ್ಠ ಸಾಮರ್ಥ್ಯ: 492.25 ಮೀಟರ್

12) ಆಲಮಟ್ಟಿ ಜಲಾಶಯ | Almatti Dam ಇಂದಿನ ನೀರಿನ ಮಟ್ಟ: 518 ಮೀಟರ್ ಗರಿಷ್ಠ ಸಾಮರ್ಥ್ಯ: 519.69 ಮೀಟರ್

(Monsoon 2021 karnataka 12 reservoirs and dams water level as on 8th july 2021)

Published On - 8:25 am, Thu, 8 July 21

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?