ರಾಜ್ಯಕ್ಕೆ ಮತ್ತೊಂದು ಟೆನ್ಷನ್: ವಿದೇಶದಿಂದ ಹಾರಿ ಬರಲಿದ್ದಾರೆ 10 ಸಾವಿರ ಮಂದಿ!

ಬೆಂಗಳೂರು: ಕೊರೊನಾಘಾತಕ್ಕೆ ನಲುಗಿರುವ ರಾಜ್ಯಕ್ಕೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಶೀಘ್ರವೇ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ 10 ಸಾವಿರ ಭಾರತೀಯ ಮೂಲದ ಪ್ರಯಾಣಿಕರು ವಿದೇಶಗಳಿಂದ ವಾಪಸಾಗಲಿದ್ದಾರೆ. ವಿದೇಶದಿಂದ ವಾಪಸಾಗುವ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಪಿ.ಎನ್.ರವೀಂದ್ರ ಹೇಳಿದ್ದಾರೆ. ವಿದೇಶದಿಂದ ಆಗಮಿಸಲಿರುವ ಪ್ರಯಾಣಿಕರ ಕ್ವಾರಂಟೈನ್​ಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಭಾಗಗಳಲ್ಲಿ ರೆಸಾರ್ಟ್, ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್, ಪಿಜಿಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಬಂದ ಪ್ರಯಾಣಿಕರನ್ನ ಸ್ಕ್ರೀನಿಂಗ್ ಮಾಡಿ 14 […]

ರಾಜ್ಯಕ್ಕೆ ಮತ್ತೊಂದು ಟೆನ್ಷನ್: ವಿದೇಶದಿಂದ ಹಾರಿ ಬರಲಿದ್ದಾರೆ 10 ಸಾವಿರ ಮಂದಿ!

Updated on: May 05, 2020 | 3:47 PM

ಬೆಂಗಳೂರು: ಕೊರೊನಾಘಾತಕ್ಕೆ ನಲುಗಿರುವ ರಾಜ್ಯಕ್ಕೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಶೀಘ್ರವೇ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ 10 ಸಾವಿರ ಭಾರತೀಯ ಮೂಲದ ಪ್ರಯಾಣಿಕರು ವಿದೇಶಗಳಿಂದ ವಾಪಸಾಗಲಿದ್ದಾರೆ. ವಿದೇಶದಿಂದ ವಾಪಸಾಗುವ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಪಿ.ಎನ್.ರವೀಂದ್ರ ಹೇಳಿದ್ದಾರೆ.

ವಿದೇಶದಿಂದ ಆಗಮಿಸಲಿರುವ ಪ್ರಯಾಣಿಕರ ಕ್ವಾರಂಟೈನ್​ಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಭಾಗಗಳಲ್ಲಿ ರೆಸಾರ್ಟ್, ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್, ಪಿಜಿಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಬಂದ ಪ್ರಯಾಣಿಕರನ್ನ ಸ್ಕ್ರೀನಿಂಗ್ ಮಾಡಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತೆ.

ಸ್ಕ್ರೀನಿಂಗ್ ವೇಳೆ 3 ವಿಭಾಗಗಳಾಗಿ ವಿಂಗಡನೆ:
ಪ್ರಯಾಣಿಕರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತೆ. ಈ ವೇಳೆ ಎ, ಬಿ ಮತ್ತು ಸಿ ವಿಭಾಗಗಳಾಗಿ ವಿಂಗಡಿಸಲಾಗುತ್ತೆ. ಎ ಗ್ರೇಡ್ ಬಂದವರಿಗೆ ಬೆಂಗಳೂರಿನಲ್ಲಿ, ಬಿ ಮತ್ತು ಸಿ ಗ್ರೇಡ್ ಬಂದವರಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತೆ.

ಈ ನಿಟ್ಟಿನಲ್ಲಿ ಈಗಾಗಲೇ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 356 ಹೋಟೆಲ್, ರೆಸಾರ್ಟ್ ಮತ್ತು ಕಲ್ಯಾಣ ಮಂಟಪಗಳನ್ನ ಬುಕ್ಕಿಂಗ್ ಮಾಡಲಾಗಿದೆ ಎಂದು ಟಿವಿ9ಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದ್ದಾರೆ.

Published On - 3:42 pm, Tue, 5 May 20