ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆ, ಕಾಂಪೌಂಡ್​​ಗಳ ತೆರವು

Edited By:

Updated on: Dec 29, 2025 | 3:20 PM

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ವಿವಾದದ ನಡುವೆ ರಾಯಚೂರಲ್ಲೂ ಮನೆ, ಕಾಂಪೌಂಡ್​​ ಮತ್ತು ಕಟ್ಟೆಗಳ ತೆರವು ನಡೆದಿದೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ, ಪೊಲೀಸ್ ಬಂದೋಬಸ್ತ್​​ನೊಂದಿಗೆ ಸುಮಾರು 20ಕ್ಕೂ ಅಧಿಕ ಮನೆಗಳನ್ನು ಡೆಮಾಲಿಶ್​ ಮಾಡಲಾಗಿದೆ.

ರಾಯಚೂರು, ಡಿಸೆಂಬರ್​​ 29: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿರುವ ನಡುವೆ ರಾಯಚೂರಿನಲ್ಲೂ ಜೆಸಿಬಿಗಳು ಘರ್ಜಿಸಿವೆ. ನಗರದ ಮಾವಿನಕೆರೆ ರಸ್ತೆಯ ವಾರ್ಡ್ ನಂ. 4ರ ಮುಖ್ಯ ರಸ್ತೆಯ ಎರಡು ಬದಿಯಲ್ಲಿ 20 ಅಡಿ ತೆರವುಗೊಳಿಸಲಾಗಿದೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ 20ಕ್ಕೂ ಅಧಿಕ ಮನೆ, 25 ಕಾಂಪೌಂಡ್ ಮತ್ತು ಕಟ್ಟೆಗಳು ತೆರವು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್​​ನಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Dec 29, 2025 03:19 PM