ಇಂದು ಅಪ್ಪಳಿಸಲಿದೆ ಕೊರೊನಾ ಸುನಾಮಿ? ಬರಬೇಕಿದೆ ಸಾವಿರಾರು ಟೆಸ್ಟ್ ವರದಿಗಳು

ಬೆಂಗಳೂರು: ಇಂದು ಒಂದೇ ದಿನ ಬೆಂಗಳೂರಿನಲ್ಲೇ ಸಾವಿರಕ್ಕೂ ಹೆಚ್ಚು ಜನರ ಕೊರೊನಾ ಟೆಸ್ಟ್ ವರದಿ ಬರುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಂಟೇನ್‌ಮೆಂಟ್ ಜೋನ್, ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರು, ವಿದೇಶದಿಂದ ಬಂದವರ ಕೊವಿಡ್ ಟೆಸ್ಟ್ ವರದಿ ಬರಬೇಕಿದೆ. ಅದು ಇಂದೇ ಬರುವ ಸಾಧ್ಯತೆ ಇದೆ. ಮಧ್ಯಾಹ್ನ ಒಂದು ವರದಿ, ಸಂಜೆ ಒಂದು ವರದಿ ಬರಲಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಶಂಕಿತರ ವರದಿಗೆ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಹೆಲ್ತ್ ಬುಲೆಟಿನ್‌ನಲ್ಲಿ ಏರುತ್ತಾ ನಂಬರ್ಸ್ […]

ಇಂದು ಅಪ್ಪಳಿಸಲಿದೆ ಕೊರೊನಾ ಸುನಾಮಿ? ಬರಬೇಕಿದೆ ಸಾವಿರಾರು ಟೆಸ್ಟ್ ವರದಿಗಳು

Updated on: May 26, 2020 | 11:59 AM

ಬೆಂಗಳೂರು: ಇಂದು ಒಂದೇ ದಿನ ಬೆಂಗಳೂರಿನಲ್ಲೇ ಸಾವಿರಕ್ಕೂ ಹೆಚ್ಚು ಜನರ ಕೊರೊನಾ ಟೆಸ್ಟ್ ವರದಿ ಬರುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕಂಟೇನ್‌ಮೆಂಟ್ ಜೋನ್, ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರು, ವಿದೇಶದಿಂದ ಬಂದವರ ಕೊವಿಡ್ ಟೆಸ್ಟ್ ವರದಿ ಬರಬೇಕಿದೆ. ಅದು ಇಂದೇ ಬರುವ ಸಾಧ್ಯತೆ ಇದೆ. ಮಧ್ಯಾಹ್ನ ಒಂದು ವರದಿ, ಸಂಜೆ ಒಂದು ವರದಿ ಬರಲಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಶಂಕಿತರ ವರದಿಗೆ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಹೆಲ್ತ್ ಬುಲೆಟಿನ್‌ನಲ್ಲಿ ಏರುತ್ತಾ ನಂಬರ್ಸ್ ಅನ್ನೋ ಭೀತಿ ಶುರುವಾಗಿದೆ.

ಇಲ್ಲಿಯ ವರೆಗೆ ರಾಜ್ಯದಲ್ಲಿ 2,182 ಕೊರೊನಾ ಸೋಂಕಿತರಿದ್ದಾರೆ. ಈ ಪೈಕಿ 44ಜನ ಮೃತಪಟ್ಟಿದ್ದಾರೆ. ಹಾಗೂ 1,432 ಕೊರೊನಾ ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬರುವ ವರದಿಯ ನಂತರ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.

Published On - 10:55 am, Tue, 26 May 20