BMTC ಬಸ್ ಅದೇ ಗೋಳು.. ಸಮಯಕ್ಕೆ ಬರ್ತಿಲ್ಲ ಅಂತಾ ಪ್ರಯಾಣಿಕರ ವಾಗ್ವಾದ
ಬೆಂಗಳೂರು: ಬಿಎಂಟಿಸಿ ಎಡವಟ್ಟಿನ ಮೇಲೆ ಎಡವಟ್ಟನ್ನು ಮಾಡುತ್ತಿದೆ. ಸರಿಯಾದ ಸಮಯಕ್ಕೆ ಬಸ್ ಬರದೆ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆ ಗಟ್ಟಲೆ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ಬಸ್ ಬಂದ ತಕ್ಷಣ ಸಾಮಾಜಿಕ ಅಂತರ ಮರೆತು ನಾ ಮುಂದು ತಾ ಮುಂದು ಎಂದು ನುಗ್ಗಿ ಪ್ರಯಾಣಿಸುತ್ತಿದ್ದಾರೆ. ಬಿಎಂಟಿಸಿ ಸರಿಯಾದ ವ್ಯವಸ್ಥೆ ಒದಗಿಸುವಲ್ಲಿ ಎಡವಿದೆ. ಒಂದು ಬಸ್ನಲ್ಲಿ 42 ಜನ ಪ್ರಯಾಣ ಮಾಡುತ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳ ಜತೆ ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ಸಹ ನಡೆದಿದೆ. ಬೆಳಗ್ಗೆ 6.30ರಿಂದ […]
ಬೆಂಗಳೂರು: ಬಿಎಂಟಿಸಿ ಎಡವಟ್ಟಿನ ಮೇಲೆ ಎಡವಟ್ಟನ್ನು ಮಾಡುತ್ತಿದೆ. ಸರಿಯಾದ ಸಮಯಕ್ಕೆ ಬಸ್ ಬರದೆ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆ ಗಟ್ಟಲೆ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ಬಸ್ ಬಂದ ತಕ್ಷಣ ಸಾಮಾಜಿಕ ಅಂತರ ಮರೆತು ನಾ ಮುಂದು ತಾ ಮುಂದು ಎಂದು ನುಗ್ಗಿ ಪ್ರಯಾಣಿಸುತ್ತಿದ್ದಾರೆ.
ಬಿಎಂಟಿಸಿ ಸರಿಯಾದ ವ್ಯವಸ್ಥೆ ಒದಗಿಸುವಲ್ಲಿ ಎಡವಿದೆ. ಒಂದು ಬಸ್ನಲ್ಲಿ 42 ಜನ ಪ್ರಯಾಣ ಮಾಡುತ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳ ಜತೆ ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ಸಹ ನಡೆದಿದೆ. ಬೆಳಗ್ಗೆ 6.30ರಿಂದ ಬಿಎಂಟಿಸಿ ಬಸ್‌ಗಾಗಿ ಕಾಯುತ್ತಿದ್ದೇವೆ. ಈವರೆಗೆ ಬಸ್ ಬಂದಿಲ್ಲ, ಎಷ್ಟೊತ್ತಿಗೆ ಬರುತ್ತೆ. ಬಸ್ ಬರುತ್ತಾ, ಇಲ್ವಾ ಅದನ್ನಾದ್ರೂ ಹೇಳಿ. ಸುಮ್ಮನೆ ಸುಳ್ಳು ಹೇಳಿ ನಮಗೆ ತೊಂದರೆ ಕೊಡಬೇಡಿ ಎಂದು ಕೆ.ಆರ್.ಮಾರುಕಟ್ಟೆನಲ್ಲಿ ಪ್ರಯಾಣಿಕರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು.
Published On - 9:38 am, Tue, 26 May 20