ಬೆಂಗಳೂರು: ಬಾಳಿ ಬದುಕಬೇಕಾದ ಅದೆಷ್ಟೋ ಜೀವಿಗಳು ಮಹಾಮಾರಿ ಕೊರೊನಾದಿಂದ ಸಾವನ್ನಪ್ಪಿವೆ. ಜೊತೆಗೆ ಸಾವನ್ನಪ್ಪುತ್ತಲೇ ಇವೆ. ತಂದೆ, ತಾಯಿ, ಮಕ್ಕಳು, ಸಹೋದರರು, ಸ್ನೇಹಿತರ ಸಾವನ್ನು ಅರಗಿಸಿಕೊಳ್ಳದೆ ಪ್ರತಿ ಕ್ಷಣವೂ ಬದುಕಿದ್ದು, ಸತ್ತಂತಾಗಿದೆ. ಇದೇ ರೀತಿ ಮನ ಕಲಕುವ ಘಟನೆಯೊಂದು ಇದೀಗ ನಡೆದಿದೆ. ಕೊರೊನಾ ಎಂಬ ಮಹಾಮಾರಿ ಸೋಂಕು ಅಮ್ಮ ಮತ್ತು ಮಗನ ದೂರ ಮಾಡಿದೆ. ಕೊರೊನಾದಿಂದ ಸಾವನ್ನಪ್ಪಿರುವ ತಾಯಿಯ ನಿಧನದ ಸುದ್ದಿ ಬಗ್ಗೆ ಮಗನಿಗೆ ತಿಳಿಸದೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ತಾಯಿ ಮತ್ತು ಮಗನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಉಸಿರಾಟದ ಸಮಸ್ಯೆಯಿಂದ ತಾಯಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ತಾಯಿ ಸಾವನ್ನಪ್ಪಿರುವ ಮಾಹಿತಿಯನ್ನು ಕುಟುಂಬಸ್ಥರು ಮಗನಿಗೆ ತಿಳಿಸಿಲ್ಲ. ಅಮ್ಮ ಹೇಗಿದ್ದಾರೆಂದು ಕರೆ ಮಾಡಿ ಕೇಳುತ್ತಿರುವ ಪುತ್ರನಿಗೆ ಏನನ್ನೂ ಹೇಳಲಾಗದೆ ಕುಟುಂಬಸ್ಥರು ಸಂಕಟ ಎದುರಾಗಿದೆ.
32 ವರ್ಷದ ಮಗನಿಗೆ ಉಸಿರಾಟದ ಸಮಸ್ಯೆ ಹಿನ್ನೆಲೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಮ್ಮನ ಮೃತದೇಹ ಸುಮನಹಳ್ಳಿ ಚಿತಾಗಾರದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸುತ್ತಿರುವ ಕುಟುಂಬಸ್ಥರು ತಾಯಿ, ಮಗನ ಪರಿಸ್ಥಿತಿ ಕಂಡು ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ
ಅಜ್ಜ ಅಜ್ಜಿ ನೆನಪಿಗಾಗಿ ಬಸ್ ನಿಲ್ದಾಣ ನಿರ್ಮಿಸಿದ ಮೊಮ್ಮಗ; ವ್ಯಕ್ತಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಗರ್ಭಾವಸ್ಥೆಯಲ್ಲೂ ರಸ್ತೆಗಿಳಿದು ಕಾರ್ಯ ನಿರ್ವಹಿಸಿದ ಡಿಎಸ್ಪಿ ಶಿಲ್ಪಾ ಸಾಹುಗೆ ಎಲ್ಲೆಡೆ ಮೆಚ್ಚುಗೆ
(Mother died death due to Covid 19 and family has not informed son about death of mother)